ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ ಹೇಳಿಕೆ ಬೇಸ್​ಲೆಸ್​: ಸಚಿವ ಹಾಲಪ್ಪ ಆಚಾರ್ - terrorist organization al qaeda

ಸಿದ್ದರಾಮಯ್ಯ ಆರ್​ಎಸ್​ಎಸ್​ ಮೇಲೆ ಮಾಡಿರುವ ಆರೋಪ ಬೇಸ್​ಲೆಸ್​. ಅವರಿಗೆ ಆಗುತ್ತಿರುವ ಹೊಟ್ಟೆ ನೋವನ್ನು ಆರ್​ಎಸ್​ಎಸ್​ ಮೇಲೆ ದೂರಿ ತೀರಿಸಿಕೊಳ್ಳುತ್ತಿದ್ದಾರೆ- ಹಾಲಪ್ಪ ಆಚಾರ್

Halappa Achar reaction on Siddaramaiah statement
ಸಚಿವ ಹಾಲಪ್ಪ ಆಚಾರ್

By

Published : Apr 8, 2022, 10:57 PM IST

ಧಾರವಾಡ:ಸಿದ್ದರಾಮಯ್ಯ ಅವರಿಗೆ ಮಾತನಾಡೋಕೆ ಏನೂ ವಿಷಯ ಇಲ್ಲ, ಎಲ್ಲದಕ್ಕೂ ಆರ್​ಎಸ್​ಎಸ್, ಬಿಜೆಪಿ ಎನ್ನುತ್ತಾರೆ. ಅದೇ ಅವರಿಗೆ ರೂಢಿಯಾಗಿ ಬಿಟ್ಟಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರ ಬೀರುವ ಪರಿಣಾಮದ ಹೊಟ್ಟೆ ನೋವಿಗೆ ಹೀಗೆ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಸುಮ್ಮನೆ ಇನ್ನೊಬ್ಬರ ಮುಖಕ್ಕೆ ವರೆಸುತ್ತಿದ್ದಾರೆ. ಆರ್‌ಎಸ್‌ಎಸ್ ಇಂತಹುದೆಲ್ಲ ಮಾಡುವ ಪ್ರಶ್ನೆ ಇಲ್ಲ ಸಿದ್ದರಾಮಯ್ಯ ಮಾತನಾಡುವುದೆಲ್ಲ ಬೆಸ್‌ಲೆಸ್‌ ಎಂದರು.


ಅಮಿತ್ ಶಾ ಹಿಂದಿ ಹೇರಿಕೆ‌ ವಿಚಾರ: ಹಿಂದಿ ಹೇರಿಕೆ ಅಂತಾ ಯಾಕೆ ತಿಳಿದುಕೊಳ್ಳಬೇಕು. ಇಡೀ ದೇಶದಲ್ಲಿ ಅದು ಕಾಮನ್ ಭಾಷೆ ಎಂದು ಹೇಳಿ ಮಾತಾನಾಡಬೇಕು. ಯಾರೋ ಬೇರೆ ರಾಜ್ಯದಿಂದ ಬಂದ ಅಧಿಕಾರಿ ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕು ಎಂದು ಹೇಳುತ್ತೇವೆ. ಇದನ್ನು ಹೇರಿಕೆ ಅನ್ನಬೇಕಾ, ಅನ್ನಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ:ಲೌಡ್ ಸ್ಪೀಕರ್ ಬಳಕೆ-ಡಿಜಿಪಿ ಸುತ್ತೋಲೆ: ರಾಜ್ಯಾದ್ಯಂತ ಪೊಲೀಸರು ಹೈ ಅಲರ್ಟ್

For All Latest Updates

ABOUT THE AUTHOR

...view details