ಕರ್ನಾಟಕ

karnataka

ETV Bharat / city

ಹುಬ್ಬಳ್ಳಿ: ನೆಕ್ಸ್ ಇನ್‌ವೆಸ್ಟ್​​ಮೆಂಟ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ - hubballi latest news

ನೆಕ್ಸ್ ಇನ್‌ವೆಸ್ಟ್​​ಮೆಂಟ್ ನಂಬಿ ವ್ಯಕ್ತಿಯೊಬ್ಬರು ವಂಚನೆಗೀಡಾಗಿರೋ ಘಟನೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

fraud in the name of nex investment
ನೆಕ್ಸ್ ಇನ್‌ವೆಸ್ಟ್​​ಮೆಂಟ್ ಹೆಸರಿನಲ್ಲಿ ವಂಚನೆ

By

Published : Nov 9, 2021, 12:25 PM IST

ಹುಬ್ಬಳ್ಳಿ:ನೆಕ್ಸ್ ಕಾಯಿನ್ ಟ್ರೇಡಿಂಗ್ / ನೆಕ್ಸ್ ಇನ್‌ವೆಸ್ಟ್​​ಮೆಂಟ್ ಹೆಸರಿನಲ್ಲಿ ನಗರದ ವ್ಯಕ್ತಿಯೊಬ್ಬರ ಖಾತೆಯಿಂದ 8.13 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಪ್ರಕರಣ ಬೆಳಕಿಗೆ ಬಂದಿದೆ.

ಜಯನಗರ ನಿವಾಸಿ ಪ್ರಕಾಶ್​ ಲಕಮನಹಳ್ಳಿ ವಂಚನೆಗೊಳಗಾದವರು. ವ್ಯಕ್ತಿಯೊಬ್ಬ ಪ್ರಕಾಶ್​ ಅವರನ್ನು ‘ನೆಕ್ಸ್ ಇನ್‌ವೆಸ್ಟ್​​ಮೆಂಟ್123’ ಎಂಬ ಹೆಸರಿನ ವಾಟ್ಸ್ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದ. ಆದರೆ, ಪ್ರಕಾಶ್​ ಅವರು ಗ್ರೂಪ್​ನಿಂದ ಹೊರಗೆ ಬಂದಿದ್ದರು. ಮತ್ತೊಂದು ನಂಬರ್ ಮೂಲಕ ಬೇರೊಬ್ಬರು ಕರೆ ಮಾಡಿ, ತಾವು ಫ್ಯಾಷನ್ ಡಿಸೈನರ್ ಎಂದು ಹೇಳಿಕೊಂಡಿದ್ದರು. ನೆಕ್ಸ್ ಕಾಯಿನ್​ನಲ್ಲಿ ಹೂಡಿಕೆ ಮಾಡಿ ತಾವು ಲಾಭ ಪಡೆದಿರುವುದಾಗಿ ನಂಬಿಸಿದ್ದರು. ವೆಬ್‌ಸೈಟ್ ಲಿಂಕ್ ಕೂಡ ಕಳುಹಿಸಿದ್ದರು. ಆ ಲಿಂಕ್ ಕ್ಲಿಕ್ ಮಾಡಿ ಹೆಸರು, ವಿಳಾಸ, ಇ-ಮೇಲ್ ಐಡಿ, ಆಧಾರ್ ಕಾರ್ಡ್, ಫೋಟೋ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ:'ಅಪ್ಪು' ಅಭಿಮಾನಕ್ಕೆ ಸಾಕ್ಷಿ ಈ ಊರು: ಇಲ್ಲಿ ಎಲ್ಲರ ಕೈಯಲ್ಲೂ ಪವರ್​ಸ್ಟಾರ್​ ಟ್ಯಾಟೂ, ಮನೆಯಲ್ಲಿ ಫೋಟೋ

ಬಳಿಕ ಬ್ಯಾಂಕ್ ಖಾತೆ ಮೂಲಕ ಹಣ ಹೂಡಿಕೆ ಮಾಡಿ. ನಿಮ್ಮ ಹಣವನ್ನು ಡಾಲರ್ ರೂಪದಲ್ಲಿ ಪರಿವರ್ತಿಸಿ ನಿಮ್ಮ ಪರವಾಗಿ ನೆಕ್ಸ್ ಕಾಯಿನ್‌ನಲ್ಲಿ ಹೂಡಿಕೆ ಮಾಡುತ್ತೇವೆ. ಬಂದ ಲಾಭವನ್ನು ನಿಮ್ಮ ಖಾತೆಗೆ ಜಮೆ ಮಾಡುತ್ತೇವೆ. ಅದರಲ್ಲಿ ನಮಗೆ ಶೇ.20ರಷ್ಟು ಕಮಿಷನ್ ಕೊಡಿ ಎಂದು ನಂಬಿಸಿದ್ದರು. ಬಳಿಕ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡು ಲಾಭ-ನಷ್ಟದ ಮಾಹಿತಿ ತೋರಿಸುತ್ತಿದ್ದರು. ಹಣ ಬಿಡಿಸಿಕೊಳ್ಳಲು ಮುಂದಾದಾಗ ಹಣ ಫ್ರೀಜ್ ಆಗಿದೆ ಎಂದು ವಂಚಿಸಿದ್ದಾರೆಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details