ಕರ್ನಾಟಕ

karnataka

ETV Bharat / city

ಜೆಸಿಬಿ ಕೊಡಿಸುವುದಾಗಿ 5 ಲಕ್ಷ ರೂ. ವಂಚನೆ ಆರೋಪ: ಓರ್ವನ ಬಂಧನ

ಜೆಸಿಬಿ ಕೊಡಿಸುವುದಾಗಿ ಐದು ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದು ವಂಚಿಸಿದ್ದ ಆರೋಪಿಯನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸಿದ್ದಾರೆ.

fraud arrested in hubli
ಜೆಸಿಬಿ ಕೊಡಿಸುವುದಾಗಿ 5 ಲಕ್ಷ ರೂ. ವಂಚನೆ ಆರೋಪ: ಓರ್ವನ ಬಂಧನ

By

Published : Mar 2, 2021, 3:09 AM IST

ಹುಬ್ಬಳ್ಳಿ: ಸೇಲ್ಸ್ ಮ್ಯಾನೇಜರ್ ಎಂದು ಹೇಳಿಕೊಂಡು ಓಎಲ್​ಎಕ್ಸ್​ನಲ್ಲಿ ಜೆಸಿಬಿ ಮಾರಾಟಕ್ಕೆ ಇದೆ ಎಂದು ನಂಬಿಸಿ 5 ಲಕ್ಷ ರೂಪಾಯಿ ವಂಚನೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಗಿಲೆಗೇರಿ ಗ್ರಾಮದ ಶಿವಾನಂದ ನಾಗಪ್ಪ ದೂಪದಾಳ (37) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ 5 ಲಕ್ಷ ರೂಪಾಯಿಗಳು ಹಾಗೂ ಒಂದು ಮೊಬೈಲ್ ಹ್ಯಾಂಡ್ ಸೆಟ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ನನಗೆ ವೇತನ ಬೇಡ, 1 ರೂ. ಗೌರವಧನ ಸಾಕು: ಮದನ್ ಗೋಪಾಲ್

ಆರೋಪಿತನು ದೂರುದಾರಿಗೆ ತಾನು ಫೈನಾನ್ಸ್ ಕಂಪನಿಯೊಂದರ ಸೇಲ್ಸ್​ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡು, ಜೆಸಿಬಿ ಮಾರಾಟಕ್ಕೆ ಇದೆ ಎಂದು ನಂಬಿಸಿದ್ದನು. 16 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿ, 5 ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದನು.

ಕೆಲವು ದಿನಗಳ ನಂತರ ಜೆಸಿಬಿ ಕೊಡಿಸದೇ, ನೀಡಿದ ಹಣವನ್ನೂ ಮರಳಿ ನೀಡದೇ ಇದ್ದಾಗ ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಉಪನಗರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details