ಕರ್ನಾಟಕ

karnataka

ETV Bharat / city

ರಾಯಚೂರಿನಲ್ಲಿ ಕಾಣೆಯಾಗಿದ್ದ ನಾಲ್ವರು ಪಿಯು ವಿದ್ಯಾರ್ಥಿನಿಯರು ಪತ್ತೆ - Etv bharat kannada

ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಪತ್ತೆ-ರಾಯಚೂರಿನ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು 3 ದಿನದ ಬಳಿಕ ಪ್ರತ್ಯಕ್ಷ​- ಇಬ್ಬರು ಹುಬ್ಬಳ್ಳಿಯಲ್ಲಿ ಪತ್ತೆಯಾದರೆ, ಇನ್ನಿಬ್ಬರು ರಾಯಚೂರಲ್ಲೇ ಪ್ರತ್ಯಕ್ಷ

girl studets missing case
ವಿದ್ಯಾರ್ಥಿನಿಯರು ಕಾಣೆಯಾಗಿರುವ ಪ್ರಕರಣ

By

Published : Jul 26, 2022, 12:20 PM IST

ರಾಯಚೂರು/ಹುಬ್ಬಳ್ಳಿ:ನಗರದಲ್ಲಿ 3 ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ಇಂದು ಪತ್ತೆಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವತಿಯರು ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಪತ್ತೆಯಾದರೆ, ಮತ್ತಿಬ್ಬರು ರಾಯಚೂರು ನಗರದ ಸಾಥ್​ ಮೈಲ್​ ಕ್ರಾಸ್​ ಬಳಿ ಪತ್ತೆಯಾಗಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಸ್ಟೇಷನ್ ರಸ್ತೆಯಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದಂತಹ ಈ ನಾಲ್ವರು ವಿದ್ಯಾರ್ಥಿನಿಯರು ಜುಲೈ 23ರಂದು ಕಾಣೆಯಾಗಿದ್ದುರು. ಈ ಕುರಿತು ವಿದ್ಯಾರ್ಥಿನಿಯರು ಪೋಷಕರು ರಾಯಚೂರು ಮಹಿಳಾ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಎರಡು ಕಡೆ ಪತ್ತೆಯಾಗಿದ್ದಾರೆ.

ಇದನ್ನೂ ಓದಿ:ರಾಯಚೂರು: ನಾಲ್ವರು ವಿದ್ಯಾರ್ಥಿನಿಯರು ಕಾಣೆ.. ಪೊಲೀಸರಿಂದ ತನಿಖೆ ಚುರುಕು

ABOUT THE AUTHOR

...view details