ಕರ್ನಾಟಕ

karnataka

ETV Bharat / city

ನಾನೇ ತಳವೂರಿಕೊಂಡಿರಲಾಗಲ್ಲ, ನೀವೂ ಮುಂದಿನ ಡಿ ಕೆ ಶಿವಕುಮಾರ್ ಆಗ್ಬೇಕು - ಡಿಕೆಶಿ ಕರೆ - ರಾಹುಲ್ ಗಾಂಧಿ ಪ್ರತಿಭಟನೆ

ಒಂದು ಕಾಲದಲ್ಲಿ ಇಂದಿರಾ ಗಾಂಧಿ‌ ಹೆಸರು ಹೇಳಿದ್ರೇ ವೋಟ್ ಸಿಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ, ಬಹಳ ಭಾಗಗಳಾಗಿದೆ. ಪಕ್ಷ ಬಿಟ್ಟು ಹೋದವರಿಂದ ಬಹಳ ಬದಲಾವಣೆ ಆಗಿದೆ. ಈ ದೇಶ ಉಳಿಯಬೇಕಾದ್ರೆ ಮಹಿಳೆಯರು, ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ..

dk-shivakumar-talk-about-indian-congress-party
ದೇಶ ಉಳಿಯಬೇಕಾದರೆ ಮಹಿಳೆಯರು, ವಿದ್ಯಾರ್ಥಿಗಳಿಂದ ಸಾಧ್ಯ: ಡಿಕೆ ಶಿವಕುಮಾರ್

By

Published : Oct 3, 2020, 4:40 PM IST

ಹುಬ್ಬಳ್ಳಿ :ಪರಿಶಿಷ್ಟ ಜಾತಿಯ ಮಗಳು ಸತ್ತರೇ, ಆ ಬಾಲಕಿ ಕುಟುಂಬಕ್ಕೆ ಶವ ಕೊಟ್ಟಿಲ್ಲ. ಇದನ್ನು ಖಂಡಿಸಿ ರಾಷ್ಟ್ರೀಯ ಕಾಂಗ್ರೆಸ್ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದ್ರೆ ಅವರನ್ನು ಬಂಧಿಸುತ್ತಾರೆ. ಇದು ದೇಶಕ್ಕೆ, ಪ್ರಧಾನಿ ಮೋದಿಗೆ ಶೋಭೆ ತರುತ್ತದೆಯಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಹಿಳೆಯರು, ವಿದ್ಯಾರ್ಥಿಗಳಿಂದದೇಶ ಉಳಿಯಲು ಸಾಧ್ಯ : ಡಿ ಕೆ ಶಿವಕುಮಾರ್

ನಗರದಲ್ಲಿಂದು ಕಾಂಗ್ರೆಸ್ ಯುವ ಕಾರ್ಯಕರ್ತರ ಸದಸ್ಯತ್ವ ಅಭಿಯಾನದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅವ್ಯವಸ್ಥೆ, ದುರಾಡಳಿತ ಇದೆಲ್ಲವೂ ಅಂತ್ಯವಾಗಬೇಕಾದ್ರೆ ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಬೇಕು.

ನೀವು ಮುಂದಿನ ಡಿ ಕೆ‌ ಶಿವಕುಮಾರ್ ಆಗಬೇಕು, ನಾನೇ ತಳ ಊರಿಕೊಂಡು ಕುಳಿತುಕೊಳ್ಳಲು ಬಂದಿಲ್ಲ ಎಂದರು. ನಮ್ಮ ಅಧಿಕಾರವನ್ನು ವಿಧಾನಸೌಧ, ಜಿಲ್ಲಾ ಪಂಚಾಯತ್, ಕಾರ್ಪೊರೇಷನ್‌ನಲ್ಲಿ ಇಟ್ಟುಕೊಳ್ಳೋಣ ಎಂದರು.

ಒಂದು ಕಾಲದಲ್ಲಿ ಇಂದಿರಾ ಗಾಂಧಿ‌ ಹೆಸರು ಹೇಳಿದ್ರೇ ವೋಟ್ ಸಿಗುತ್ತಿತ್ತು. ಈಗ ಆ ಪರಿಸ್ಥಿತಿ ಇಲ್ಲ, ಬಹಳ ಭಾಗಗಳಾಗಿದೆ. ಪಕ್ಷ ಬಿಟ್ಟು ಹೋದವರಿಂದ ಬಹಳ ಬದಲಾವಣೆ ಆಗಿದೆ. ಈ ದೇಶ ಉಳಿಯಬೇಕಾದ್ರೆ ಮಹಿಳೆಯರು, ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದರು.

ABOUT THE AUTHOR

...view details