ಕರ್ನಾಟಕ

karnataka

ETV Bharat / city

ಗಾರ್ಡನ್ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣ, ಹು-ಧಾ ಪಾಲಿಕೆ ಆಯುಕ್ತರಿಂದ ನೊಟೀಸ್ ಜಾರಿ - ಹು-ಧಾ ಪಾಲಿಕೆ ಆಯುಕ್ತ

ಈ ಕುರಿತು ಮಾತನಾಡಿದ ಹು-ಧಾ ಪಾಲಿಕೆ ಆಯುಕ್ತರು, ನವೀನ್ ಪಾರ್ಕ್ ನಲ್ಲಿ ಪಾಲಿಕೆ ಅಧಿಕಾರಿಗಳ ಕಣ್ಣು ತಪ್ಪಿಸಿ ಇಂತಹ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈಗಾಗಲೇ ಕಾಮಗಾರಿಯನ್ನು ತಡೆಯಲಾಗಿದೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಹೇಳಲಾಗಿದೆ ಎಂದರು.

notice issued by Commissioner
ಹು-ಧಾ ಪಾಲಿಕೆ ಆಯುಕ್ತರಿಂದ ನೊಟೀಸ್ ಜಾರಿ

By

Published : Nov 12, 2020, 5:32 PM IST

ಹುಬ್ಬಳ್ಳಿ: ವಾರ್ಡ್​ ನಂ. 48 ಕೇಶ್ವಾಪೂರದ ನವೀನ್ ಪಾರ್ಕ್​ನಲ್ಲಿ ಗಾರ್ಡನ್​ಗೆ ಬಿಟ್ಟಿದ್ದ ಸ್ಥಳದಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ಪಾಲಿಕೆ ಅಧಿಕಾರಿಗಳು ನೊಟೀಸ್ ಜಾರಿ ಮಾಡಿ ಕಾಮಗಾರಿ ತಡೆ ಹಿಡಿದಿದ್ದಾರೆ.

ಹು-ಧಾ ಪಾಲಿಕೆ ಆಯುಕ್ತರಿಂದ ನೊಟೀಸ್ ಜಾರಿ

ಈ ವಿಚಾರವಾಗಿ ಹಿಂದೆ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗಿತ್ತು. ಇದರಿಂದ ಎಚ್ಚೆತ್ತಕೊಂಡ ಪಾಲಿಕೆ ಅಧಿಕಾರಿಗಳು ಕಟ್ಟಡ ನಿರ್ಮಾಣ ಮಾಡುತ್ತಿದ್ದವರ ವಿರುದ್ಧ ನೊಟೀಸ್ ಜಾರಿ ಮಾಡಿ ಕಾಮಗಾರಿ ತಡೆ ಹಿಡಿದಿದ್ದಾರೆ.

ಈ ಕುರಿತು ಮಾತನಾಡಿದ ಹು-ಧಾ ಪಾಲಿಕೆ ಆಯುಕ್ತರು, ನವೀನ್ ಪಾರ್ಕ್ ನಲ್ಲಿ ಪಾಲಿಕೆ ಅಧಿಕಾರಿಗಳ ಕಣ್ಣು ತಪ್ಪಿಸಿ ಇಂತಹ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈಗಾಗಲೇ ಕಾಮಗಾರಿಯನ್ನು ತಡೆಯಲಾಗಿದೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಹೇಳಲಾಗಿದೆ ಎಂದರು.

ABOUT THE AUTHOR

...view details