ಕರ್ನಾಟಕ

karnataka

ಕಾರ್ಮಿಕರ ಕಿಟ್ ದುರುಪಯೋಗ ಆರೋಪ: ಬಿಜೆಪಿ ಶಾಸಕರ ವಿರುದ್ಧ ಕಾರ್ಮಿಕ ಸಚಿವರಿಗೆ ದೂರು

By

Published : May 19, 2020, 9:10 PM IST

ವಲಸೆ ಕಾರ್ಮಿಕರಿಗೆ ನೀಡಿದ್ದ ಕಿಟ್​ನಲ್ಲಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್​ ಕಾರ್ಯಕರ್ತರು ಕಾರ್ಮಿಕ ಸಚಿವರಿಗೆ ದೂರು ನೀಡಿದ್ದಾರೆ. ಕಲಘಟಗಿ ಶಾಸಕ ಸಿ.ಎಂ ನಿಂಬಣ್ಣವರ್​​​ ಕಾರ್ಮಿಕರಿಗೆ ನೀಡಬೇಕಿದ್ದ ಕಿಟ್​ ಅನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ ಎಂದು ಕೈ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

Congress leaders complaint against BJP Mla for misusing kit
ಕಾರ್ಮಿಕರ ಕಿಟ್ ದುರಪಯೋಗ ಆರೋಪ: ಬಿಜೆಪಿ ಶಾಸಕರ ವಿರುದ್ಧ ಕಾರ್ಮಿಕ ಸಚಿವರಿಗೆ ದೂರು

ಹುಬ್ಬಳ್ಳಿ: ಕಾರ್ಮಿಕರಿಗೆ ನೀಡುವ ಕಿಟ್ ಶಾಸಕರು ತಮ್ಮ ಕಾರ್ಯಕರ್ತರಿಗೆ ಹಂಚುತ್ತಿದ್ದಾರೆ ಎಂಬ ಆರೋಪ‌ ಕೇಳಿ ‌ಬಂದಿದೆ. ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ್, ಕಾರ್ಮಿಕರಿಗೆ ನೀಡಬೇಕಿದ್ದ ಕಿಟ್​​ಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಡುತ್ತಾರೆ ಎಂದು ಶಾಸಕರ ವಿರುದ್ಧ ಕಾಂಗ್ರೆಸ್ ಮುಖಂಡರು ದೂರು ಸಲ್ಲಿಸಿದ್ದಾರೆ.

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ.ನಿಂಬಣ್ಣವರಿಂದ ಕಿಟ್ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಕಾರ್ಮಿಕ ಇಲಾಖೆ ನೀಡುವ ಕಿಟ್‌ಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.

ಲಾಕ್​ಡೌನ್‌ನಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ದಿನಬಳಕೆಯ ಕಿಟ್‌ಗಳನ್ನು ಸರ್ಕಾರ ನೀಡಿದೆ. ಆದರೆ, ಶಾಸಕರು ಕಾರ್ಮಿಕರ ಕಿಟ್‌ಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಹಂಚುತ್ತಿದ್ದಾರೆ. ಇನ್ನೂ ಕಾರ್ಮಿಕ ಇಲಾಖೆಯಲ್ಲಿರಬೇಕಾದ ಕಿಟ್‌ಗಳನ್ನು ಶಾಸಕರ ಕಚೇರಿಯಲ್ಲಿ‌ ಇಟ್ಟಿರುವುದು ಯಾಕೆ..? ಎಂಬುದು ಕಾಂಗ್ರೆಸ್ ಮುಖಂಡರ ಪ್ರಶ್ನೆಯಾಗಿದೆ.

ಈ ಹಿನ್ನೆಲೆ ಕಾಂಗ್ರೆಸ್ ಮುಖಂಡರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್​ ಹಾಗೂ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ABOUT THE AUTHOR

...view details