ಹುಬ್ಬಳ್ಳಿ: ಲಾಕ್ಡೌನ್ ಸಡಿಲಿಕೆ ಮಾಡದಿದ್ದರೂ ಅಶೋಕನಗರ ಸೇತುವೆ ಸಮೀಪ ಒಂದು ತಿಂಗಳಿಂದ ಹಾಕಲಾಗಿದ್ದ ಚೆಕ್ ಪೋಸ್ಟ್ ತೆರುವುಗೊಳಿಸಲಾಗಿದೆ. ಇಲ್ಲಿಂದ 1 ಕಿ.ಮೀ. ಅಂತರದಲ್ಲಿ ಕಂಟೇನ್ಮೆಂಟ್ ಪ್ರದೇಶವಿದೆ.
ಅಶೋಕನಗರ ಸೇತುವೆ ಮುಖಾಂತರ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೀಗಾಗಿ ವಾಹನಗಳ ತಪಾಸಣೆ ಮತ್ತು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಕಂಟೇನ್ಮೆಂಟ್ ಪ್ರದೇಶದಲ್ಲಿ 21 ದಿನದಿಂದ ಹೊಸ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಹೀಗಾಗಿ ಚೆಕ್ ಪೋಸ್ಟ್ ಇಂದು ತೆರುವುಗೊಳಿಸಲಾಯಿತು.
ಅಲ್ಲದೆ ಕಿಮ್ಸ್ನ ಪಿಎಂಎಸ್ಎಸ್ವೈ ಆಸ್ಪತ್ರೆಯ ಕೂಗಳತೆ ದೂರದಲ್ಲಿರುವ ಮತ್ತೊಂದು ಚೆಕ್ ಪೋಸ್ಟ್ ತೆರುವುಗೊಳಿಸಲಾಗಿದೆ. ಇದರಿಂದ ಕಿಮ್ಸ್ ಆಸ್ಪತ್ರೆ ಹಿಂಭಾಗದಿಂದ ಯಾರು ಬೇಕಾದರೂ ಆಸ್ಪತ್ರೆ ಪ್ರವೇಶಿಸಬಹುದು. ಅಲ್ಲದೆ ಆಸ್ಪತ್ರೆ ಹಿಂಭಾಗದಲ್ಲಿ ಕೊರೊನಾ ಸೋಂಕಿತರನ್ನು ಇರಿಸಲಾಗಿದೆ.
ದಿನ ನೂರಾರು ಮಂದಿ ಕೊರೊನಾ ಪರೀಕ್ಷೆಗೆ ಆಗಮಿಸುತ್ತಾರೆ. ಕಿಮ್ಸ್ ಆಸ್ಪತ್ರೆ ಹಿಂಭಾಗದಲ್ಲಿ ಚೆಕ್ ಪೋಸ್ಟ್ ತೆರುವುಗೊಳಿಸಿದ ಪರಿಣಾಮ ಜನರಲ್ಲಿ ಆತಂಕ ಮೂಡಿಸಿದೆ. ಧಾರವಾಡ ಜಿಲ್ಲೆಯಲ್ಲಿ ಈವರೆಗೆ 11 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 7 ಮಂದಿ ಗುಣಮುಖರಾಗಿದ್ದಾರೆ. 5 ಸಕ್ರಿಯ ಪ್ರಕರಣಗಳಿವೆ.