ಹುಬ್ಬಳ್ಳಿ: ದಿನೇ-ದಿನೆ ಏರುತ್ತಿರುವ ಇಂಧನ ಬೆಲೆ ಇದೀಗ ಪ್ರತೀ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ. ಇದರಿಂದಾಗಿ ಜನಸಾಮಾನ್ಯರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇತ್ತ ಪೆಟ್ರೋಲ್ ಬಂಕ್ಗಳಿಗೂ ಬೆಲೆ ಏರಿಕೆಯಿಂದ ಮೊತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ.
ಪೆಟ್ರೋಲ್ - ಡಿಸೇಲ್ ಬೆಲೆ ಶತಕದ ಗಡಿಯತ್ತ ಬಂದು ನಿಂತಿದೆ. ಇದು ಪೆಟ್ರೋಲ್ ಬಂಕ್ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಈವರೆಗೆ ಬಂಕ್ಗಳಲ್ಲಿ 99.99 ರೂಪಾಯಿಯ ಡಬಲ್ ಡಿಜಿಟ್ ನಂಬರ್ ಮಾತ್ರ ಇತ್ತು. ಇತ್ತೀಚೆಗೆ ಆರಂಭವಾದ ಆಟೋ ಮಷಿನ್ ಬಂಕ್ಗಳಲ್ಲಿ ಮಾತ್ರ ಆಟೋಮೆಟಿಕ್ ನಂಬರ್ ಬರುತ್ತದೆ. ಆದರೆ, ಹಳೆಯ ಬಂಕ್ಗಳಲ್ಲಿ 'ತ್ರಿ' ಡಿಜಿಟ್ ನಮೂದಾಗುತ್ತಿಲ್ಲ. ಅದನ್ನು ಮೂರಂಕಿ ಮಾಡಲು ಹೊರಟರೇ ಝಿರೋ ಆಗುತ್ತಿದೆ. ಇದರಿಂದಾಗಿ ಒಂದೊಮ್ಮೆ ತೈಲ ಬೆಲೆ 100ರ ಗಡಿ ದಾಟಿದ್ರೆ, ದೇಶದ 40ರಷ್ಟು ಹಳೆಯ ಬಂಕ್ ಮಾಲೀಕರಿಗೆ ಸಮಸ್ಯೆ ಎದುರಾಗಲಿದೆ.