ಕರ್ನಾಟಕ

karnataka

ETV Bharat / city

ಆಡಳಿತ ವೈಫಲ್ಯ ಹಾಗೂ ದುರಾಡಳಿತದಿಂದ ಬಿಜೆಪಿ ಸರ್ಕಾರ ದಿವಾಳಿಯಾಗಿದೆ: ಬಸವರಾಜ್ ರಾಯರೆಡ್ಡಿ

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆರ್ಥಿಕ ಅಶಿಸ್ತಿನಿಂದ ಕೂಡಿದೆ. ಜನಪರ ಯೋಜನೆ ಜಾರಿಗೊಳಿಸದೆ ಸಾಲದ ಶೂಲದಲ್ಲಿ ಸಿಲುಕಿಕೊಂಡಿದೆ. ಬಿ.ಎಸ್.ಯಡಿಯೂರಪ್ಪ ಸುಮಾರು 1.26 ಲಕ್ಷ ಕೋಟಿವರೂ. ಸಾಲ ಮಾಡಿ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊಡೆತ ನೀಡಿದ್ದಾರೆ ಎಂದು ದೂರಿದರು.

basavaraja rayareddy talk about Failure of the BJP government
ಬಿಜೆಪಿ ಸರ್ಕಾರ ಆಡಳಿಯ ವೈಫಲ್ಯ ಹಾಗೂ ದುರಾಡಳಿತದಿಂದ ದಿವಾಳಿಯಾಗಿದೆ: ಬಸವರಾಜ್ ರಾಯರೆಡ್ಡಿ

By

Published : Sep 19, 2020, 2:45 PM IST

ಹುಬ್ಬಳ್ಳಿ:ಬಿಜೆಪಿ ಸರ್ಕಾರ ಆಡಳಿತ ವೈಫಲ್ಯ ಹಾಗೂ ದುರಾಡಳಿತದಿಂದ ದಿವಾಳಿಯಾಗಿದೆ ಎಂದು ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಆರ್ಥಿಕ ಅಶಿಸ್ತಿನಿಂದ ಕೂಡಿದೆ. ಜನಪರ ಯೋಜನೆ ಜಾರಿಗೊಳಿಸದೆ ಸಾಲದ ಶೂಲದಲ್ಲಿ ಸಿಲುಕಿಕೊಂಡಿದೆ. ಬಿ.ಎಸ್.ಯಡಿಯೂರಪ್ಪ ಸುಮಾರು 1.26 ಲಕ್ಷ ಕೋಟಿ ರೂ. ಸಾಲ ಮಾಡಿ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊಡೆತ ನೀಡಿದ್ದಾರೆ ಎಂದು ದೂರಿದರು.

ಡ್ರಗ್ಸ್ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರು ಅವರ ಮೇಲೆ ಕ್ರಮ ತಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತೇನೆ. ಇದಕ್ಕೆ ಬಿಜೆಪಿ, ಕಾಂಗ್ರೆಸ್ ಎಂಬುದಿಲ್ಲ. ನಮ್ಮ ಪಕ್ಷದ ಯಾರಾದ್ರು ಭಾಗಿಯಾಗಿದ್ರೆ ಅವರ ಮೇಲೆ ಕ್ರಮ ತಗೆದುಕೊಳ್ಳಲು ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹೇಳುತ್ತೇವೆ. ಇದರಲ್ಲಿ ‌ಯಾರೇ ತಪ್ಪು ಮಾಡಿದ್ರು ಪ್ಪೇ. ನಾನು ಮಾಡಿದ್ರು ತಪ್ಪೇ ಎಂದರು.


ABOUT THE AUTHOR

...view details