ಕರ್ನಾಟಕ

karnataka

ETV Bharat / city

ಪರಿಸರಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೂಲಕ ಜಾಗೃತಿ

ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ನಿಮಜ್ಜನೆ ಮಾಡದೇ ಬಕೆಟ್ ನೀರಲ್ಲಿ ಮಾಡಿ, ನಂತರ ಅದೇ ಮಣ್ಣಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಬಹುದು ಎಂದು 'ಹುಬ್ಬಳ್ಳಿ ಲೇಡಿಸ್ ಸರ್ಕಲ್‌ 45' ಅಧ್ಯಕ್ಷೆ ಮಾನಸಿ‌ ಕೋಠಾರಿ ತಿಳಿಸಿದ್ದಾರೆ.

'Hubli Ladies Circle 45' by Eco Friendly Ganesha Murthy
'ಹುಬ್ಬಳ್ಳಿ ಲೇಡಿಸ್ ಸರ್ಕಲ್ 45' ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೂಲಕ ಜಾಗೃತಿ

By

Published : Aug 30, 2020, 8:41 PM IST

ಹುಬ್ಬಳ್ಳಿ: ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ 'ಹುಬ್ಬಳ್ಳಿ ಲೇಡಿಸ್ ಸರ್ಕಲ್‌ 45' ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿದೆ.

'ಹುಬ್ಬಳ್ಳಿ ಲೇಡಿಸ್ ಸರ್ಕಲ್ 45' ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮೂಲಕ ಜಾಗೃತಿ

ಕ್ಲಬ್ ವತಿಯಿಂದ ಕಚೇರಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಅದು ನೀರಿನಲ್ಲಿ ಕರಗದೇ ಇರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದರಿಂದ ಹಲವಾರು ರೋಗಗಳು ಬರುವ ಸಂಭವವಿದೆ.

ಈ ಹಿನ್ನೆಲೆಯಲ್ಲಿ ಎಲ್ಲರೂ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪರಿಸರ ಸ್ನೇಹಿ ಗಣೇಶೋತ್ಸವ ಮಾಡಬೇಕೆಂದು ಜಾಗೃತಿ ಮೂಡಿಸಿದರು. ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ನಿಮಜ್ಜನೆ ಮಾಡದೇ ಬಕೆಟ್ ನೀರಲ್ಲಿ ಮಾಡಿ, ನಂತರ ಅದೇ ಮಣ್ಣಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಬಹುದು ಎಂದು 'ಹುಬ್ಬಳ್ಳಿ ಲೇಡಿಸ್ ಸರ್ಕಲ್‌ 45' ಅಧ್ಯಕ್ಷೆ ಮಾನಸಿ‌ ಕೋಠಾರಿ ತಿಳಿಸಿದ್ದಾರೆ.

ABOUT THE AUTHOR

...view details