ಕರ್ನಾಟಕ

karnataka

ETV Bharat / city

ಹಿಟ್ಲರ್ ಬಗ್ಗೆ ಕೇಳಿದ್ವಿ, ಆದ್ರೆ ಇವಾಗ ನೋಡ್ತಿದೀವಿ: ಆಲ್ಕೋಡು ಹನುಮಂತಪ್ಪ - constitution right

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದ್ದಾರೆ.

citizen amendment act
ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ

By

Published : Dec 19, 2019, 4:47 PM IST

ಧಾರವಾಡ:ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ಹತ್ತಿಕ್ಕುವುದು ಸರಿಯಾದ ಬೆಳವಣಿಗೆಯಲ್ಲ. ಇಂದು ಅವರು ಅಧಿಕಾರದಲ್ಲಿದ್ದಾರೆ ಹಾಗಾಗಿ ಇದು ಅವರಿಗೆ ಸರಿ ಕಾಣಬಹುದು. ಅಧಿಕಾರದಲ್ಲಿ ಇಲ್ಲದಿದ್ದಾಗ ಅವರೂ ಹೋರಾಟಗಳನ್ನು ನಡೆಸಿದ್ದಾರೆ ಎಂದು ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಅವರು ಹೋರಾಟದ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಿಗೆ ಏನೆಲ್ಲಾ ಬೈದು ಅಧಿಕಾರಕ್ಕೆ ಬಂದಿದ್ದಾರೆ ಎಂಬುದನ್ನು ಮರೆಯಬಾರದು ಎಂದು ಕಿಡಿಕಾರಿದರು.

ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ

ಸಂವಿಧಾನಬದ್ಧವಾದ ಹಕ್ಕು ಮೊಟಕುಗೊಳಿಸುವ ಕೆಲಸವನ್ನು ದೇಶದಲ್ಲಿ ಯಾರೂ ಮಾಡಿಲ್ಲ. ಸ್ವಾತಂತ್ರ್ಯ ಭಾರತದಲ್ಲಿ ಮೋದಿ ಅವರು ಪ್ರಥಮ ಬಾರಿಗೆ ಇದನ್ನು ಮಾಡಿದ್ದು ಸರಿಯಾದ ಕ್ರಮವಲ್ಲ. ಕಾಯಿದೆಯಲ್ಲಿ ಕೇವಲ ಮುಸ್ಲಿಮರ ಪ್ರಶ್ನೆ ಇಲ್ಲ. ಇದು ದೇಶದ ಪ್ರಶ್ನೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶಾದ್ಯಂತ ಹೋರಾಟ ಮಾಡುತ್ತಿರುವುದು ಸರಿಯಿದೆ. ಹಿಟ್ಲರ್ ಹಾಗಿದ್ದ, ಹೀಗಿದ್ದ ಅಂತಾ ಕೇಳಿದ್ವಿ. ಆದರೆ ಇದನ್ನು ನೋಡಿದ್ರೆ ಹಿಟ್ಲರ್ ಹಿಂಗೆ ಇದ್ದನೇನೋ ಎಂದೆನಿಸುತ್ತದೆ. ಮೂಲಭೂತ ಹಕ್ಕುಗಳಲ್ಲಿ ಪ್ರತಿಭಟಿಸುವುದೂ ಒಂದು ಎಂದು ಹರಿಹಾಯ್ದಿದಿದ್ದಾರೆ.

ABOUT THE AUTHOR

...view details