ಹುಬ್ಬಳ್ಳಿ: ಜಿಲ್ಲಾ ಹಿರಿಯರ ಸಬಲೀಕರಣ ಇಲಾಖೆಯಿಂದ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದ ಧಾರವಾಡ ಜಿಲ್ಲೆಯ ಮೂವರು ಹಿರಿಯ ನಾಗರಿಕರು ಮಲೇಷಿಯಾದಲ್ಲಿ ನಡೆಯಲಿರುವ ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ.
ಈ ಧಾರವಾಡಿಗರ ವಯಸ್ಸು 80 ದಾಟಿದೆ... ಮಲೇಷಿಯಾ ಕ್ರೀಡಾಕೂಟಕ್ಕೆ ಹೋಗುವ ಛಾನ್ಸ್ ಸಿಕ್ಕಿದೆ - ಧಾರವಾಡ ಹಿರಿಯ ನಾಗರಿಕರು
ಡಿಸೆಂಬರ್ 2 ರಿಂದ 6ರವರೆಗೆ ಮಲೇಷಿಯಾದಲ್ಲಿ ನಡೆಯಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಧಾರವಾಡದ ಮೂವರು ಹಿರಿಯ ನಾಗರಿಕರು ಪಾಲ್ಗೊಳ್ಳಲಿದ್ದಾರೆ.
ಮಲೇಷಿಯಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಷಿಯೇಷನ್ ವತಿಯಿಂದ ಡಿಸೆಂಬರ್ 2 ರಿಂದ 6 ರವರೆಗೆ ಸಾರ್ವಾಕ್ ರಾಜ್ಯದ ರಾಜಧಾನಿ ಕುಚಿಂಗ್ ನಗರದಲ್ಲಿ 21ನೇ ಹಿರಿಯ ನಾಗರಿಕರ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಧಾರವಾಡದ ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ.
83 ವರ್ಷದ ಎಂ.ಬಿ.ಗಂಗಣ್ಣ ರನ್ನಿಂಗ್ ಹಾಗೂ ಜಾವಲಿನ್ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 84 ವರ್ಷದ ಪಿ.ಬಿ.ಹಿರೇಮಠ ಶಾಟ್ ಪುಟ್, ಡಿಸ್ಕಸ್ ಥ್ರೋ ಹಾಗೂ ರನ್ನಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದರೆ, 80 ವರ್ಷದ ಶಿವಪ್ಪ ಎಂ ಸಲಕಿ 10 ಹಾಗೂ 5 ಕಿ.ಮೀ. ನಡಿಗೆ, 5 ಕಿ.ಮೀ, 1500 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಜೊತೆಗೆ ಯೋಗಾಸನ ಪ್ರದರ್ಶನ ಮಾಡಲಿದ್ದಾರೆ.