ಕರ್ನಾಟಕ

karnataka

ETV Bharat / city

ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ನೀಡಿ: ಪಂಚಮಸಾಲಿ ಸ್ವಾಮೀಜಿ ಆಗ್ರಹ - Panchamasali swamiji

ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿರುವ ವೀರಶೈವ ಮಠಕ್ಕೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್, 370ನೇ ವಿಧಿ ರದ್ದತಿ ಕುರಿತು ಮಾಹಿತಿ ನೀಡಲು ಭೇಟಿ ನೀಡಿದರು.

ಪಂಚಮಸಾಲಿ ಸ್ವಾಮೀಜಿ

By

Published : Sep 28, 2019, 3:14 PM IST

ದಾವಣಗೆರೆ:ಪಂಚಮಸಾಲಿ ಸಮಾಜದ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ವೀರಶೈವ ಪಂಚಮಸಾಲಿ ಪೀಠಾದಿಪತಿ ಶ್ರೀ ವಚನಾನಂದ ಮಹಾಸ್ವಾಮಿಗಳು ಆಗ್ರಹಿಸಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿರುವ ವೀರಶೈವ ಮಠಕ್ಕೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್, 370ನೇ ವಿಧಿ ರದ್ದತಿ ಕುರಿತು ಮಾಹಿತಿ ನೀಡಲು ಭೇಟಿ ನೀಡಿದ ಸಂದರ್ಭದಲ್ಲಿ ಸಮಾಜದ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ನಮಗೆ ಬೇಸರ ತಂದಿದೆ. ಬಿಜೆಪಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಶ್ರೀಗಳು ಹೇಳಿದರು.

370ನೇ ವಿಧಿ ರದ್ದತಿ ಕುರಿತು ಪಂಚಮಸಾಲಿ ಸ್ವಾಮಿಗಳ ಬಳಿ ಮಾಹಿತಿ ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ರವಿಕುಮಾರ್

ಈ ಸಂದರ್ಭ ವಿಧಾನಪರಿಷತ್ ಸದಸ್ಯ ರವಿಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಆಡಳಿತ ವ್ಯವಸ್ಥೆ ದೇಶದ ಎಲ್ಲಾ ರಾಜ್ಯಗಳಿಗಿಂತ ವಿಭಿನ್ನ ಇತ್ತು. ಬೇರೆ ರಾಜ್ಯದವರು ಕಾಶ್ಮೀರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಇರಲಿಲ್ಲ. ಅಲ್ಲಿನ ಜನರೂ ಸಹ ನೆಮ್ಮದಿಯಿಂದ ಜೀವನ ಸಾಗಿಸಲು ಹರ ಸಾಹಸ ಪಡಬೇಕಿತ್ತು. ಕೇಂದ್ರದ ಬಜೆಟ್​ನಲ್ಲಿ ಶೇ.11 ರಷ್ಟು ಅನುದಾನವನ್ನು ಕಾಶ್ಮೀರಕ್ಕೆ ನೀಡಬೇಕಿತ್ತು. ಆದರೆ ಆ ರಾಜ್ಯ ಮಾತ್ರ ದೇಶದ ಬೆಳವಣಿಗೆಗೆ ಸಹಕರಿಸುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದಿಟ್ಟತನದಿಂದ ಆ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದಾರೆ. ಇದರ ಪ್ರಯೋಜನಗಳನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್ ಜಾದವ್, ಮಾಜಿ ಶಾಸಕ ಬಿ.ಪಿ ಹರೀಶ್, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಎಂ ವೀರೇಶ್, ಜಿ.ಪಂ ಸದಸ್ಯ ವಾಗೀಶ್ ಸ್ವಾಮಿ, ಚುನಾವಣೆಯ ಜಿಲ್ಲಾ ಉಸ್ತುವಾರಿ ದತ್ತಾತ್ರಿ, ರಾಜು ರೋಖಡೆ, ಗೋವಿನಾಳ್ ರಾಜಣ್ಣ ಪಕ್ಷದ ಮುಖಂಡರು ಈ ವೇಳೆ ಹಾಜರಿದ್ದರು.

ABOUT THE AUTHOR

...view details