ಕರ್ನಾಟಕ

karnataka

ETV Bharat / city

ಮಾಸ್ಕ್ ಧರಿಸಿದ್ದರೆ ಸುರೇಶ್ ಅಂಗಡಿ ಬದುಕುಳಿಯುತ್ತಿದ್ದರು: ಎಂ. ಪಿ. ರೇಣುಕಾಚಾರ್ಯ - ಸುರೇಶ್ ಅಂಗಡಿ ನಿಧನ ಸುದ್ದಿ

ಕೇಂದ್ರ ಸಚಿವ ಸುರೇಶ್ ಅಂಗಡಿ ಕೊರೊನಾಕ್ಕೆ ಬಲಿಯಾಗಿದ್ದು ಆಶ್ಚರ್ಯ ತಂದಿದೆ. ನವದೆಹಲಿಗೆ ಹೋಗುವಾಗ ತಾಯಿ‌ ಕಾಲಿಗೆ ನಮಸ್ಕರಿಸಿ ಹೋಗಿದ್ದರು. ಅವರು ಮಾಸ್ಕ್​ ಸದಾ ಧರಿಸಿದ್ದರೆ ಬದುಕುಳಿಯುತ್ತಿದ್ದರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.

mp-renukacharya-statement-on-suresh-angadi-death
ಎಂ ಪಿ ರೇಣುಕಾಚಾರ್ಯ

By

Published : Sep 28, 2020, 3:23 PM IST

ದಾವಣಗೆರೆ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮಾಸ್ಕ್ ಧರಿಸಿದ್ದರೆ ಬದುಕುಳಿಯುತ್ತಿದ್ದರು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ‌ ಮಾತನಾಡಿದ ಅವರು, ಸುರೇಶ್ ಅಂಗಡಿ ಕೊರೊನಾಕ್ಕೆ ಬಲಿಯಾಗಿದ್ದು ಆಶ್ಚರ್ಯ ತಂದಿದೆ. ನವದೆಹಲಿಗೆ ಹೋಗುವಾಗ ತಾಯಿ‌ ಕಾಲಿಗೆ ನಮಸ್ಕರಿಸಿ ಹೋಗಿದ್ದರು. ಶಿಸ್ತುಬದ್ಧ ಜೀವನ ಸಾಗಿಸುತ್ತಿದ್ದರು. ಅಂಗಡಿಯವರ ಅಕಾಲಿಕ ಸಾವು ನೋವು ತಂದಿದೆ ಎಂದರು.

ಮಾಸ್ಕ್ ಧರಿಸಿದ್ದರೆ ಸುರೇಶ್ ಅಂಗಡಿ ಬದುಕುಳಿಯುತ್ತಿದ್ದರು

ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿಯೂ ಜಾಸ್ತಿಯಾಗುತ್ತಿವೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು‌‌. ಮಾಸ್ಕ್ ಧರಿಸಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ಜನರ ಸಹಕಾರ ಇಲ್ಲದಿದ್ದರೆ ಕೊರೊನಾ‌ ನಿಯಂತ್ರಣ ಅಸಾಧ್ಯ ಎಂದು ತಿಳಿಸಿದರು.

ಬೆಳಗ್ಗೆ ಎದ್ದ ತಕ್ಷಣವೇ ವೆಂಟಿಲೇಟರ್ ಇಲ್ಲ. ರಕ್ತ ಸಿಗುತ್ತಿಲ್ಲ‌. ಸೂಕ್ತ ಚಿಕಿತ್ಸೆಯೂ ಇಲ್ಲ ಎಂಬ ದೂರುಗಳು ಪ್ರತಿನಿತ್ಯ ಬರುತ್ತಿವೆ. ರಾತ್ರಿ ಎಷ್ಟು ಹೊತ್ತಿಗೆ ಕರೆ ಬಂದರೂ ಸ್ವೀಕರಿಸುತ್ತೇನೆ.‌ ಮಿಸ್ ಕಾಲ್ ಇದ್ದರೆ ಬಳಿಕ ನಾನೇ ಫೋನ್ ಮಾಡುತ್ತೇವೆ. ಜಿಲ್ಲಾಡಳಿತ ಹಾಗೂ ನಾವು ಎಷ್ಟೇ ಪ್ರಯತ್ನ ಮಾಡಿದರೂ ನಿಯಂತ್ರಣಕ್ಕೆ ಕೊರೊನಾ ಬರುತ್ತಿಲ್ಲ.‌ ಜೀವ ಎಲ್ಲರಿಗೂ ಒಂದೇ. ಬಡವರಿಂದ ಹಿಡಿದು ರಾಷ್ಟ್ರಪತಿವರೆಗಿನ ಎಲ್ಲರೂ ಒಂದೇ ಜೀವ. ಹಾಗಾಗಿ ಎಚ್ಚರ ವಹಿಸಿ ಎಂದು ಮನವಿ ಮಾಡಿದರು.

ABOUT THE AUTHOR

...view details