ಕರ್ನಾಟಕ

karnataka

ETV Bharat / city

ಹರಿಹರ: ಚಿಕನ್ ಸಾಂಬಾರ್​ ಮಾಡದ ಪತ್ನಿಯನ್ನು ನಶೆಯಲ್ಲಿ ಇರಿದು ಕೊಂದ ಕಿರಾತಕ ಪತಿ - ಹರಿಹರದಲ್ಲಿ ಪತ್ನಿ ಕೊಂದ ಪತಿ

ಚಿಕನ್ ಸಾಂಬಾರ್​ ಮಾಡಿಲ್ಲ ಎಂದು ಹೆಂಡತಿಯನ್ನು ಪತಿಯೇ ಕೊಂದ ಘಟನೆ ಹರಿಹರ ತಾಲೂಕಿನಲ್ಲಿ ನಡೆದಿದೆ.

ಚಿಕನ್ ಮಾಡದ ಪತ್ನಿಯನ್ನು ನಶೆಯಲ್ಲಿದ್ದ ಪತಿ ಇರಿದು ಕೊಂದ
ಚಿಕನ್ ಮಾಡದ ಪತ್ನಿಯನ್ನು ನಶೆಯಲ್ಲಿದ್ದ ಪತಿ ಇರಿದು ಕೊಂದ

By

Published : Jun 9, 2022, 11:59 AM IST

Updated : Jun 9, 2022, 10:49 PM IST

ದಾವಣಗೆರೆ: ಚಿಕನ್ ಸಾಂಬಾರ್​ ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಮದ್ಯದ ಅಮಲಿನಲ್ಲಿ ಪತಿಯು ಕುಡುಗೋಲಿನಿಂದ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ. ಶೀಲಾ (28) ಕೊಲೆಯಾದ ಮಹಿಳೆ, ಬನ್ನಿಕೋಡು ಗ್ರಾಮದ ಕೆಂಚಪ್ಪ ಕೊಲೆ ಮಾಡಿದ ಪತಿ.

ದಂಪತಿ ಪರಸ್ಪರ ಪ್ರೀತಿಸಿ 09 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆರೋಪಿ ಕೆಂಚಪ್ಪನಿಗೆ ಇದು ಎರಡನೇ ವಿವಾಹವಾಗಿದ್ದು, ಆತ ಮದ್ಯದ ದಾಸನಾಗಿದ್ದ, ದುಡಿಯಲು ಹೋಗದೆ ಮದ್ಯ ಸೇವಿಸಿ ಮಡದಿಯೊಂದಿಗೆ ಜಗಳ ಮಾಡುತ್ತಿದ್ದ. ಅಗಾಗ ಇಬ್ಬರ ನಡುವೆ ಜಗಳವಾದರೂ ಕೂಡ ಪೋಷಕರು ರಾಜಿ ಪಂಚಾಯತಿ ನಡೆಸಿ ತೆರಳುತ್ತಿದ್ದರು. ಅದರೆ, ಕೆಂಚಪ್ಪ ಪತ್ನಿ ಶೀಲಾ ಮೇಲೆ ಪದೇ ಪದೇ ಅನುಮಾನ ಪಡುತ್ತಿದ್ದನಂತೆ.

ಕೆಲ ದಿನಗಳ ಹಿಂದೆ ಕೂಡ ಇದೇ ವಿಚಾರಕ್ಕೆ ಜಗಳವಾಗಿದ್ದು, ಕುಡುಗೋಲಿನಿಂದ ಹಲ್ಲೆ ಮಾಡಿದ್ದ. ಆದರೆ ಶೀಲಾ ಪ್ರಾಣಾಪಾಯದಿಂದ ಪಾರಾಗಿದ್ದಳು. ಇದಲ್ಲದೆ ಒಮ್ಮೆ ಪತ್ನಿಯ ಕಾಲನ್ನು ತಿರುವಿ ಗಾಯಗೊಳಿಸಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.

ಚಿಕನ್ ಮಾಡದ ಪತ್ನಿಯನ್ನು ನಶೆಯಲ್ಲಿ ಇರಿದು ಕೊಂದ ಕಿರಾತಕ ಪತಿ

ಬುಧವಾರ (ಜೂನ್​ 08) ಮಗಳ ಹುಟ್ಟುಹಬ್ಬವನ್ನು ತವರು ಮನೆಯಲ್ಲಿ ಆಚರಿಸಿ ಗಂಡನ ಮನೆಗೆ ಬಂದಿದ್ದ ಶೀಲಾ ಬಾರದ ಲೋಕಕ್ಕೆ ತೆರಳಿದ್ದಾಳೆ. ತವರು ಮನೆಯಿಂದ ಬಂದವಳು ಚಿಕನ್ ಸಾಂಬಾರ್​ ಮಾಡಿಲ್ಲವೆಂದು ಕೆಂಚಪ್ಪ ಕೊಲೆಗೈದಿದ್ದಾನೆ. ಬಳಿಕ ಹರಿಹರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

(ಇದನ್ನೂ ಓದಿ: ಮಗನ ಶವ ನೀಡಲು ₹50 ಸಾವಿರಕ್ಕೆ ಬೇಡಿಕೆ ಇಟ್ಟ ಆಸ್ಪತ್ರೆ.. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿರುವ ದಂಪತಿ!)

Last Updated : Jun 9, 2022, 10:49 PM IST

ABOUT THE AUTHOR

...view details