ದಾವಣಗೆರೆ :ಓಜೀ ಕುಪ್ಪಂ ಗ್ಯಾಂಗ್‌ನಂತೆಯೇ ಅಮಾಯಕರ ಜನರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತಾರಾಜ್ಯ ಕಳ್ಳರನ್ನು ದಾವಣಗೆರೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದಾವಣಗೆರೆಯ ಡಿಸಿಆರ್ಬಿ ಘಟಕ ಪೊಲೀಸರು ಇಬ್ಬರು ದರೋಡೆಕೋರರನ್ನು ಸೆರೆ ಹಿಡಿದಿದ್ದಾರೆ.
ಬಂಧಿತರನ್ನು ತಮಿಳುನಾಡಿನ ಚೆನ್ನೈ ಮೂಲದ ನರೇಶ್, ಬೆಳಗಾವಿಯ ಲೋಂಡಾ ಮೂಲದ ಮೊಹಮದ್ ಹುಸೇನ್ ಮುಲ್ಲಾ ಎಂದು ಗುರುತಿಸಲಾಗಿದೆ. ಬಂಧಿತರಿಂದ 21 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಅಂತಾರಾಜ್ಯ ಕಳ್ಳರ ಬಂಧನ.. ಹಾವೇರಿ ಜಿಲ್ಲೆಯ ಹಾನಗಲ್ ಪೊಲೀಸ್ ಠಾಣೆಯಯಲ್ಲಿ 1 ಪ್ರಕರಣ, ಹರಿಹರ ಠಾಣೆಯಲ್ಲಿ 1 ಪ್ರಕರಣ, ದಾವಣಗೆರೆ ವಿದ್ಯಾನಗರ ಠಾಣೆಯಲ್ಲಿ 2 ಪ್ರಕರಣದ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರು ಪೊಲೀಸರಿಗೆ ಬೇಕಾಗಿದ್ದರು.
ಡಿಸಿಆರ್ಬಿ ಡಿವೈಎಸ್ಪಿ ಬಸವರಾಜ್ ತಂಡದಿಂದ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಇದು ಕುಪ್ಪಂ ಗ್ಯಾಂಗ್‌ನಂತೆಯೇ ಜನರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದರು.
ಇದನ್ನೂ ಓದಿ:ಭೋವಿ ಅಭಿವೃದ್ಧಿ ನಿಗಮದಲ್ಲಿ ಲೂಟಿಗೆ ಯತ್ನ ಆರೋಪ: ನಿಗಮ ಮಂಡಳಿ ನಿರ್ದೇಶಕನ ಬಂಧನಕ್ಕೆ ಪೊಲೀಸರ ಶೋಧ