ದಾವಣಗೆರೆ: ಸೋಂಕಿತನೋರ್ವ ಕೋವಿಡ್ ಕೇರ್ ಸೆಂಟರ್ಗೆ ತೆರಳದೆ ಅಧಿಕಾರಿಗಳ ಮುಂದೆ ವಿಷದ ಬಾಟಲಿ ಹಿಡಿದು ರಾದ್ಧಾಂತ ಮಾಡಿದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದಲ್ಲಿ ನಡೆದಿದೆ.
ವಿಷ ಕೊಡಿ ಕುಡಿತಿನಿ, ಆಸ್ಪತ್ರೆಗೆ ಮಾತ್ರ ಬರಲ್ಲ: ಕೊರೊನಾ ಸೋಂಕಿತನ ರಾದ್ಧಾಂತಕ್ಕೆ ಅಧಿಕಾರಿಗಳು ಹೈರಾಣ!
ಸೋಂಕಿತನೋರ್ವನ್ನು ಕೋವಿಡ್ ಕೇರ್ ಸೆಂಟರ್ಗೆ ಕರೆದುಕೊಂಡು ಹೋಗಲು ಬಾನುವಳ್ಳಿ ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ, ವಿಷ ಕೊಡಿ ಕುಡಿತೀನಿ.. ಆದ್ರೆ ಕೋವಿಡ್ ಕೇರ್ ಸೆಂಟರ್ಗೆ ಮಾತ್ರ ಬರೋಲ್ಲ ಎಂದು ಮನೆಗೆ ಹೋಗಿ ವಿಷದ ಬಾಟಲಿ ತಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ. ಸೋಂಕಿತನ ರಾದ್ಧಾಂತಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಪಡುವಂತಾಯಿತು.
ಜಿಲ್ಲಾಧಿಕಾರಿಗಳ ಆದೇಶದಂತೆ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗೆ ಕರೆದುಕೊಂಡು ಹೋಗಲು ಬಾನುವಳ್ಳಿ ಗ್ರಾಮಕ್ಕೆ ಅಧಿಕಾರಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ, ವಿಷ ಕೊಡಿ ಕುಡಿತಿನಿ.. ಆದ್ರೆ ಕೋವಿಡ್ ಕೇರ್ ಸೆಂಟರ್ಗೆ ಮಾತ್ರ ಬರೋಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಅಲ್ಲದೆ, ಮನೆಗೆ ಹೋಗಿ ವಿಷದ ಬಾಟಲಿ ತಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ. ಸೋಂಕಿತನ ಈ ರಾದ್ಧಾಂತಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಹೈರಾಣಾದರು.
ಕೊನೆಗೂ ಸೋಂಕಿತ ವ್ಯಕ್ತಿ ಕೋವಿಡ್ ಕೇರ್ ಸೆಂಟರ್ಗೆ ಹೋಗದೆ ಹಠ ಹಿಡಿದು ಮನೆಯಲ್ಲೇ ಕೂತಿದ್ದಾನೆ. ಸೋಂಕಿತನ ಕುಟುಂಬದ ಐದು ಜನ ಸದಸ್ಯರಿಗೂ ಕೋವಿಡ್ ತಗುಲಿದೆ ಎನ್ನಲಾಗ್ತಿದೆ. ಆದ್ರೆ ಎಲ್ಲರೂ ಕೊರೊನಾ ಕೇರ್ ಸೆಂಟರ್ಗೆ ಹೋಗದೆ ಹಠ ಹಿಡಿದು ಮನೆಯಲ್ಲಿಯೇ ಕುಳಿತಿದ್ದಾರೆ. ಹಲವು ಬಾರಿ ಗ್ರಾಮದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಏನೇ ಹೇಳಿದರೂ ಸೋಂಕಿತರು ಮಾತ್ರ ಕ್ಯಾರೇ ಎನ್ನದಿರುವುದು ವಿಪರ್ಯಾಸ.