ದಾವಣಗೆರೆ: ಯುವತಿಯರಿಗೆ ಚುಡಾಯಿಸುತ್ತಿದ್ದರು ಎಂದು ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರು ಯುವಕರಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದಲ್ಲಿ ನಿನ್ನೆ ನಡೆದಿದೆ. ಚಿರಡೋಣಿ ಗ್ರಾಮದ ದೇವೇಂದ್ರ ಹಾಗೂ ಸುನೀಲ್ ಚಾಕು ಇರಿತಕ್ಕೊಳಗಾದವರು.
ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಕೆಲ ಯುವಕರು ಹಾಗೂ ಕರೆಕಟ್ಟೆ ಗ್ರಾಮದ ಯುವಕರ ನಡುವೆ ಗಲಾಟೆಯಾಗಿದೆ. ರಾಘವೇಂದ್ರ ಎಂಬಾತ ಯುವಕರಿಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗ್ತಿದೆ. ಕೆರೆಕಟ್ಟೆಯಲ್ಲಿ ಶಾಲಾ ಮಟ್ಟದ ಸ್ಪೋರ್ಟ್ಸ್ ನಡೆಯುವಾಗ ಘಟನೆ ನಡೆದಿದೆ.