ದಾವಣಗೆರೆ :ಸರ್ಕಾರ ಬಡವರಿಗೆ ಹೊರೆಯಾಗಬಾರದೆಂದು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಅಧಿಕಾರಿಗಳ ಅಂದಾ- ದರ್ಬಾರ್ನಿಂದಾಗಿ ಆ ಯೋಜನೆಗಳೆ ಬಡವರಿಗೆ ಮಾರಕವಾಗುತ್ತಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹರಿಹರ ಭಾಗದ ರೈತರಿಗೆ ಜನರಿಗೆ ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಗಳು ಕಂಠಕವಾಗಿವೆ.
ದಾವಣಗೆರೆ ಜಿಲ್ಲೆಯ ಹರಿಹರ ಚನ್ನಗಿರಿ ತಾಲೂಕುಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳು ರೈತರಿಗೆ ಹಾಗೂ ಬಡವರ್ಗದ ಜನರಿಗೆ ಕಂಠಕವಾಗಿ ಪರಿಣಮಿಸಿವೆ. ಇದರಿಂದ ಸರ್ಕಾರದ ವಿರುದ್ಧ ಜನ ಸಾಮಾನ್ಯರು ಹಿಡಿ ಶಾಪ ಹಾಕುವಂತಾಗಿದೆ. ಏಕಾಏಕಿ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಬಂದಿರುವುದ್ದರಿಂದ ಬಡವರ್ಗದ ಜನರು ವಾಸಿಸುತ್ತಿರುವ ಮನೆಯ ವಿದ್ಯುತ್ ಸಂಪರ್ಕವನ್ನು ಕೆಇಬಿ ಅಧಿಕಾರಿಗಳು ಕಡಿತ ಮಾಡಿರುವ ಘಟನೆ ಕೂಡ ನಡಿದಿದೆ.
ಇದರಿಂದ ಬಡವರು ಬಂದಿರುವ ಸಾವಿರಗಟ್ಟಲೇ ಕರೆಂಟ್ ಬಿಲ್ ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆ ಗಳನ್ನು ಜಾರಿಗೆ ತಂದಿದ್ದು, ಬಡವರಿಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಯಾಗಿದೆ. ಆದರೆ, ಈಗ ಆ ಮನೆಗಳಿಗೆ ಈಗ ಐವತ್ತು ಅರವವತ್ತು ಸಾವಿರ ಬಿಲ್ ಬಂದಿದ್ದು, ಬಡವರ ನೆಮ್ಮದಿ ಹಾಳು ಮಾಡಿದೆ. ಬಿಲ್ ಕಟ್ಟಬೇಕು ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ವಾರ್ನಿಂಗ್ ನೀಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.