ಬೆಂಗಳೂರು:ಹಣಕಾಸಿನ ವಿಚಾರಕ್ಕೆ ಯುವಕನೊಬ್ಬನಿಗೆ ನಾಲ್ಕೈದು ಮಂದಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಗರದ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಆಚಾರ್ಯ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ನಡೆದಿದೆ.
ಸೋಲದೇವನಹಳ್ಳಿಯ ರವಿಕುಮಾರ್ (28) ಮೃತ ಯುವಕನಾಗಿದ್ದಾನೆ. ರವಿಕುಮಾರ್ ಎಂಬಿಎ ಪದವೀಧರನಾಗಿದ್ದು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು.
ಕೆಲವರು ಮಾತನಾಡುವ ಸಲುವಾಗಿ ರವಿಕುಮಾರ್ನನ್ನು ಶನಿವಾರ ಸಂಜೆ ಏಳು ಗಂಟೆ ಸುಮಾರಿಗೆ ಸೋಲದೇನವಹಳ್ಳಿಯ ಆಚಾರ್ಯ ಕಾಲೇಜು ಮೈದಾನಕ್ಕೆ ಕರೆಸಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಮತ್ತು ರವಿಕುಮಾರ್ ನಡುವೆ ಮಾತಿನ ಚಕಮಕಿ ನಡೆದು ರವಿಕುಮಾರ್ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.