ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಯುವಕ ಸಾವನ್ನಪ್ಪಿದ್ದಾನೆ. ಇಂಥ ಘಟನೆ ಆಗಬಾರದಿತ್ತು. ಆದರೆ, ನಡೆದುಹೋಗಿದೆ. ಜಲಮಂಡಳಿ ತಪ್ಪಿನಿಂದ ಇಂಥ ಅನಾಹುತ ಆಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಜಲಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು. ಬಿಬಿಎಂಪಿಗೆ ಮಾಹಿತಿ ನೀಡದೇ ರಸ್ತೆ ಅಗೆದಿದ್ದರಿಂದ ಇಂಥ ಅನಾಹುತ ಆಗಿದೆ. ಈಗಾಗಲೇ ಜಲಮಂಡಳಿ, ಬೆಸ್ಕಾಂ ಸೇರಿ ಇತರೆ ಸಂಸ್ಥೆಗಳ ವಿರುದ್ಧ 5 ಪ್ರಕರಣ ದಾಖಲು ಮಾಡಲಾಗಿದೆ ಅಂದರು. ಇನ್ನು ಮೃತ ಯುವಕನಿಗೆ ಪರಿಹಾರ ವಿಚಾರವು ಕಾನೂನಿನಲ್ಲಿ ಅವಶ್ಯಕತೆ ಇದ್ದರೆ ಪರಿಹಾರದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಇಂದಿರಾ ಕ್ಯಾಂಟಿನ್ನಲ್ಲಿ ಸಿಗ್ತಿಲ್ಲ ಕ್ವಾಲಿಟಿ ಫುಡ್ :ಇಂದಿರಾ ಕ್ಯಾಂಟಿನ್ ಸಂಬಂಧ ಒಂದು ಪ್ರತ್ಯೇಕ ರಿವ್ಯೂ ಮೀಟಿಂಗ್ ಮಾಡಲಾಗಿದೆ. ಆ ಪ್ರಕಾರ ಇನ್ನೊಮ್ಮೆ ಯಾವ ಮಾಡೆಲ್ನಲ್ಲಿ ಮುಂದುವರೆಸಿಕೊಂಡು ಹೋಗಬೇಕು ಅಂತಾ ಚರ್ಚೆ ಮಾಡಲಾಗುತ್ತೆ. ಈ ಬಾರಿ ಬಿಬಿಎಂಪಿ ಬಜೆಟ್ನಲ್ಲಿ ಪ್ರತ್ಯೇಕ ಕ್ರಮಕೈಗೊಳ್ಳುತ್ತೇವೆ ಎಂದರು.