ಬೆಂಗಳೂರು:ಕೊರೊನಾ ವಾರಿಯರ್ ಕೆಲಸ ಮಾಡುತ್ತಿರುವ ಪೊಲೀಸರ ಸುರಕ್ಷತೆಯ ದೃಷ್ಟಿಯಿಂದ ವೈಲ್ಡ್ ಕ್ರಾಫ್ಟ್ ಮಾಸ್ಕ್ ತಯಾರಿಕಾ ಕಂಪನಿಯು ಉಚಿತವಾಗಿ ಮಾಸ್ಕ್ ವಿತರಣೆ ಮಾಡಿದೆ.
ಕಂಪನಿಯವರು ಸ್ವತಃ ನಗರ ಆಯುಕ್ತರ ಕಚೇರಿಗೆ ಆಗಮಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಹೆಚ್ಚುವರಿ ಆಯುಕ್ತ ನಿಂಬಾಳ್ಕರ್ ಅವರಿಗೆ 66 ಸಾವಿರ ಮಾಸ್ಕ್ ಹಸ್ತಾಂತರ ಮಾಡಿದರು.
ವೈಲ್ಡ್ ಕ್ರಾಫ್ಟ್ ಕಂಪನಿಯಿಂದ ಪೊಲೀಸರಿಗೆ ಉಚಿತ ಮಾಸ್ಕ್ ವಿತರಣೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಪೊಲಿಸರಿಗೆ 66 ಸಾವಿರ ಉತ್ತಮ ದರ್ಜೆಯ ಮಾಸ್ಕ್ ನೀಡಲಾಗಿದೆ. ತಜ್ಞರ ಹಾಗೂ ವೈದ್ಯರ ಸಲಹೆ ಪ್ರಕಾರ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡೋದು ಬಹಳ ಮುಖ್ಯ. ಈಗಾಗಲೇ ಈ ಕುರಿತು ಪೊಲೀಸ್ ಇಲಾಖೆಯಲ್ಲಿ ಸಮಿತಿ ಮಾಡಲಾಗಿದೆ. ಇದರ ಹೊಣೆಯನ್ನು ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೊತ್ತಿದ್ದಾರೆ ಎಂದು ತಿಳಿಸಿದರು.
ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾತನಾಡಿ, ಪ್ರತಿ ಸಿಬ್ಬಂದಿಯೂ ಜವಾಬ್ದಾರಿ ಹೊತ್ತು, ಪ್ರತಿಯೊಬ್ಬರ ಆರೋಗ್ಯ ಕುರಿತು ಕಾಳಜಿ ವಹಿಸುತ್ತಿದ್ದಾರೆ. ಪ್ರತಿ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮಾಸ್ಕ್ ಬಳಸೋದು ಕಡ್ಡಾಯ. ಮಾಸ್ಕ್ ಧರಿಸದೇ ಓಡಾಡಿದರೆ ಅಂಥವರ ಮೇಲೆ ಎನ್ಡಿಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸರ್ಕಾರ ತಿಳಿಸಿದೆ ಎಂದು ಎಚ್ಚರಿಕೆ ನೀಡಿದರು.
ಪೊಲೀಸರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದು, ನಮ್ಮ ಕಡೆಯಿಂದ ಕೊಂಚ ಮಟ್ಟಿಗೆ ಸಹಾಯವಾಗಲಿ, ಒಬ್ಬೊಬ್ಬ ಪೊಲೀಸರಿಗೆ ಮೂರು ಮಾಸ್ಕ್‌ಗಳನ್ನು ನೀಡಿದ್ದೇವೆ ಎಂದು ವೈಲ್ಡ್ ಕ್ರಾಫ್ಟ್ ಮಾಸ್ಕ್ ತಂಡದ ಸದಸ್ಯೆ ಶ್ಯಾಮಲಾ ದೇಶಪಾಂಡೆ ತಿಳಿಸಿದರು.