ಕರ್ನಾಟಕ

karnataka

ETV Bharat / city

ಟೊಮೆಟೊ ಕೆಜಿಗೆ ₹70: ಬೆಂಗಳೂರಿನಲ್ಲಿ ಇಂದಿನ ತರಕಾರಿ ಧಾರಣೆ ಹೀಗಿದೆ ನೋಡಿ..

ನಿನ್ನೆ ಪ್ರತಿ ಕೆ.ಜಿ ಟೊಮೆಟೊ ಬೆಲೆ 90 ರೂ ಇತ್ತು. ಆದರೆ ಇಂದು 70 ರೂ.ಗೆ ಲಭ್ಯವಾಗುತ್ತಿದ್ದು ದರ ಇಳಿಕೆಯಾಗಿದೆ. ಬೆಂಗಳೂರು ಹಾಪ್​ಕಾಮ್ಸ್‌ನಲ್ಲಿ ಇಂದಿನ ತರಕಾರಿ ದರ ಹೀಗಿದೆ.

vegetables price in Bengaluru
vegetables price in Bengaluru

By

Published : Nov 28, 2021, 10:20 AM IST

ಬೆಂಗಳೂರು: ಕಳೆದ ವಾರ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತರಕಾರಿ ಬೆಲೆಗಳು ಗಗನಕ್ಕೇರಿದ್ದವು. ಕೆಜಿಗೆ 100 ರೂ ಗಡಿ ದಾಟಿದ್ದ ಟೊಮೆಟೊ ಬೆಲೆ ಈಗ ಸ್ವಲ್ಪ ತಗ್ಗಿದೆ.

ನಿನ್ನೆ ಪ್ರತಿ ಕೆ.ಜಿ ಟೊಮೆಟೊ ಬೆಲೆ 90 ರೂ ಇತ್ತು. ಆದರೆ ಇಂದು 70 ರೂ.ಗೆ ಲಭ್ಯವಾಗುತ್ತಿದೆ. ಬೆಳ್ಳುಳ್ಳಿ ಮತ್ತು ದಪ್ಪ ಮೆಣಸಿನಕಾಯಿ ದರದಲ್ಲಿ ನಿನ್ನೆಗಿಂತ ಇಂದು 2 ರೂ ಹೆಚ್ಚಾಗಿದೆ. ಕ್ಯಾರೆಟ್ ಬೆಲೆ ನಿನ್ನೆಯಷ್ಟೇ ಇದೆ. ಬೀನ್ಸ್​ 9 ರೂ ಇಳಿಕೆಯಾಗಿದೆ.

ಬೆಂಗಳೂರು ಹಾಪ್​ಕಾಮ್ಸ್‌ನಲ್ಲಿ ಇಂದಿನ ತರಕಾರಿ ದರ:

ತರಕಾರಿ- ಇಂದಿನ ದರ (ಪ್ರತಿ ಕೆ.ಜಿಗೆ)
ಬೆಳ್ಳುಳ್ಳಿ- 126 ರೂ
ಟೊಮೆಟೊ-70 ರೂ
ದಪ್ಪ ಮೆಣಸಿನಕಾಯಿ-128 ರೂ
ಹಸಿ ಮೆಣಸಿನಕಾಯಿ- 58 ರೂ
ಕ್ಯಾರೆಟ್- 94 ರೂ
ಹುರುಳಿಕಾಯಿ (ಬೀನ್ಸ್)- 85 ರೂ
ಈರುಳ್ಳಿ- 51
ಸಾಂಬರ್ ಈರುಳ್ಳಿ- 56 ರೂ
ಆಲೂಗಡ್ಡೆ- 45 ರೂ
ಮೂಲಂಗಿ- 75 ರೂ
ಬದನೆಕಾಯಿ- 110 ರೂ

*ಸೊಪ್ಪು*

ಕೊತ್ತಂಬರಿ ಸೊಪ್ಪು- 114 ರೂ
ಕೊತ್ತಂಬರಿ ನಾಟಿ- 127 ರೂ
ಮೆಂತ್ಯ ಸೊಪ್ಪು-128ರೂ
ಪಾಲಕ್ ಸೊಪ್ಪು- 107 ರೂ
ಸಬ್ಬಕ್ಕಿ ಸೊಪ್ಪು- 70 ರೂ
ಕರಿಬೇವು- 67 ರೂ
ದಂಟಿನ ಸೊಪ್ಪು- 127ರೂ

ತೆಂಗಿನ ಕಾಯಿ
32 ರೂ (ದಪ್ಪ)
28 ರೂ (ಮಧ್ಯಮ)
22 ರೂ (ಸಣ್ಣ)
16 ರೂ (ಅತಿ ಸಣ್ಣ)

ಇದನ್ನೂ ಓದಿ: 'ಅವ್ವ' ಕಥಾ ಸಂಕಲನ ಹೊರ ತರುತ್ತಿದ್ದಾರೆ ಮುಖ್ಯಮಂತ್ರಿ ಬೊಮ್ಮಾಯಿ

ABOUT THE AUTHOR

...view details