ಬೆಂಗಳೂರು: ನಗರದ ಪ್ರಮುಖ ಮಾರುಕಟ್ಟೆಯಾದ ಕೆ.ಆರ್ ಮಾರ್ಕೆಟ್ ಲಾಕ್ಡೌನ್ ಪ್ರಯುಕ್ತ ಮುಚ್ಚಿದ್ದು ತಳ್ಳು ಗಾಡಿ ಮೂಲಕ ತರಕಾರಿ ಹಣ್ಣು ವ್ಯಾಪಾರ ಜೋರಾಗಿ ನಡೆಯಿತು.
ಕೆ.ಆರ್ ಮಾರ್ಕೆಟ್ ಬಂದ್: ತಳ್ಳುವ ಗಾಡಿ ಮೊರೆ ಹೋದ ವ್ಯಾಪಾರಸ್ಥರು - ತಳ್ಳೋ ಗಾಡಿ ಮೂಲಕ ತರಕಾರಿ ಹಣ್ಣು ವ್ಯಾಪಾರ
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವಸ್ತು ಖರೀದಿಗೆ ಇಂತಿಷ್ಟೇ ಸಮಯ ನಿಗದಿ ಮಾಡಲಾಗಿದೆ. ಈ ಕಾರಣದಿಂದ ರಾಜಧಾನಿಯ ಮುಖ್ಯ ಮಾರುಕಟ್ಟೆಯಾದ ಕೆ.ಆರ್ ಮಾರುಕಟ್ಟೆ ಮುಚ್ಚಲ್ಪಟ್ಟಿದೆ. ಹಾಗಾಗಿ ಇದೀಗ ವ್ಯಾಪಾರಸ್ಥರು ತಳ್ಳುವ ಗಾಡಿಯ ಮೊರೆ ಹೋಗಿದ್ದಾರೆ.
ಕೆಆರ್ ಮಾರ್ಕೆಟ್
ಟೌನ್ಹಾಲ್ನಿಂದ ಮಾರ್ಕೆಟ್ವರೆಗೂ ಮಾರ್ಗದುದ್ದಕ್ಕೂ ತಳ್ಳು ಗಾಡಿಗಳದ್ದೇ ದರ್ಬಾರ್ ಕಂಡುಬಂತು. ನಿಗದಿತ ಸಮಯದಲ್ಲಿ ಅವಶ್ಯಕ ವಸ್ತು ಖರೀದಿಯಲ್ಲಿ ನಿರತರಾದ ಜನ ಸಾಲುಗಟ್ಟಿ ನಿಂತಿದ್ದ ಈ ಗಾಡಿಗಳಲ್ಲಿ ಖರೀದಿ ನಡೆಸಿದರು. ತರಕಾರಿ, ಹಣ್ಣು ಖರೀದಿಗೆ ಆಗಮಿಸಿದ ಜನರಿಂದ ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಯಿತು.
ಇದನ್ನೂ ಓದಿ:ವೀಕ್ಷಿಸಿ: ಮೈಕ್, ಸ್ಪೀಕರ್ ಇರುವ ಮಾಸ್ಕ್ ಅಭಿವೃದ್ದಿಪಡಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ