ಬೆಂಗಳೂರು: ಅಕಾಲಿಕವಾಗಿ ಸುರಿದ ಭಾರಿ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿದ್ದು, ತರಕಾರಿ ಬೆಲೆ ಗಗನಕ್ಕೇರಿದೆ. ನಿರಂತರ ಮಳೆಯಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ಎಲ್ಲ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ದುಪ್ಪಟ್ಟಾಗಿದೆ.
ಪೆಟ್ರೋಲ್ -ಡೀಸೆಲ್ ದರ ಮೀರಿಸಿದ ತರಕಾರಿ ಬೆಲೆ... Vegetable ಬೆಲೆ ಕಂಡು ಬೆಂಗಳೂರಿಗರು ದಂಗು - ವರುಣಾರ್ಭಟಕ್ಕೆ ಬೆಳೆ ಹಾನಿ
ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸೊಪ್ಪು, ತರಕಾರಿ ಉತ್ಪನ್ನ ರೈತರ ಜಮೀನಿನಲ್ಲೇ ಹಾಳಾಗಿವೆ. ಅಲ್ಲದೇ, ನಿರಂತರ ಮಳೆಯಿಂದ ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆ ತರಕಾರಿಗಳ ಸಗಟು ಮತ್ತು ಚಿಲ್ಲರೆ ಬೆಲೆ ದುಪ್ಪಟ್ಟಾಗಿದೆ.
ಗಗನಕ್ಕೇರಿದ ತರಕಾರಿ ಬೆಲೆ
ಬೆಂಗಳೂರಿನಲ್ಲಿ ಹೀಗಿದೆ ತರಕಾರಿ ಬೆಲೆ:
ಬೆಳ್ಳುಳ್ಳಿ | 132 ರೂ. |
ಟೊಮೇಟೊ | 103 ರೂ. |
ದಪ್ಪ ಮೆಣಸಿನಕಾಯಿ | 130 ರೂ. |
ಹಸಿ ಮೆಣಸಿನಕಾಯಿ | 60 ರೂ. |
ಗಜ್ಜರಿ | 80 ರೂ. |
ನಾಟಿ ಗಜ್ಜರಿ | 94 ರೂ. |
ಹುರಳಿಕಾಯಿ (ಬೀನ್ಸ್) | 103 ರೂ. |
ಬದನೆಕಾಯಿ | 99 ರೂ. |
ಸೌತೆಕಾಯಿ | 24 ರೂ. |
ನುಗ್ಗೆ ಕಾಯಿ | 322 ರೂ. |
ಶುಂಠಿ | 80 ರೂ. |
ಈರುಳ್ಳಿ(ಮಧ್ಯಮ) | 53 ರೂ. |
ಸಾಂಬರ್ ಈರುಳ್ಳಿ | 56 ರೂ. |
ಆಲೂಗಡ್ಡೆ | 44 ರೂ. |
ಮೂಲಂಗಿ | 67 ರೂ. |
ಕೊತ್ತಂಬರಿ ಸೊಪ್ಪು | 86 ರೂ. |
ಮೆಂತ್ಯ ಸೊಪ್ಪು | 128 ರೂ. |
ಪಾಲಕ್ ಸೊಪ್ಪು | 107 ರೂ. |
ಸಬ್ಬಕ್ಕಿ ಸೊಪ್ಪು | 70 ರೂ. |
ಕರಿಬೇವು | 67 ರೂ. |
ದಂಟಿನ ಸೊಪ್ಪು | 110 ರೂ. |
ತೆಂಗಿನ ಕಾಯಿ | 32 ರೂ. |
ಓದಿ:Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್ ಆಕಾರದ ಗೋಳಿ ಮೀನು!