ಬೆಂಗಳೂರು:ಕುರುಕ್ಷೇತ್ರ ಚಿತ್ರದ ಯಶಸ್ಸಿನ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಐತಿಹಾಸಿಕ ಚಿತ್ರವಾದ ರಾಜ ವೀರ ಮದಕರಿ ನಾಯಕ ಚಿತ್ರದಲ್ಲಿ ನಟಿಸುತ್ತಿದ್ದು,ಇಂದು ಬೆಳ್ಳಂಬೆಳಗ್ಗೆ ಚಿತ್ರದ ಮುಹೂರ್ತ ನೇರವೇರಿದೆ.
ಸೆಟ್ಟೇರಿತು ಅದ್ಧೂರಿ ಬಜೆಟ್ನ ರಾಜ ವೀರ ಮದಕರಿ ನಾಯಕ...ರಾಜಮಾತೆಯಾಗಿ ಸುಮಲತಾ ಅಂಬರೀಶ್ ಚಿತ್ರತಂಡ ನಗರದ ಗವಿಗಂಗಾಧರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಶೂಟಿಂಗ್ಗೆ ಅಣಿಯಾಗಿದೆ. ಹೊಗೇನಕಲ್ನಲ್ಲಿ ಮದಕರಿನಾಯಕನಿಗಾಗಿ ಬಹುದೊಡ್ಡ ಸೆಟ್ ಹಾಕಲಾಗಿದೆ. ಅದ್ಧೂರಿ ಬಜೆಟ್ ಸಿನಿಮಾ ಇದಾಗಿದ್ದು, ಈ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ನಿರ್ಮಾಣ ಮಾಡ್ತಿದ್ದಾರೆ. ಇನ್ನು,ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶನದಲ್ಲಿ ಸಿನಿಮಾ ಮೂಡಿಬರಲಿದೆ.
ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ನಟ ದರ್ಶನ್ ,ಹಿರಿಯ ನಟ ದೊಡ್ಡಣ್ಣ ,ನಿರ್ಮಾಪಕ ರಾಕ್ಲೈನ್ ವೆಂಕಟೇಶ್,ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು,ಸಂಸದೆ ಸುಮಲತಾ ಅಂಬರೀಶ್ ಮುನಿರತ್ನ ಭಾಗವಹಿಸಿದ್ದರು.
ಚಿತ್ರದ ಮುಹೂರ್ತ ನೇರವೇರಿದಕ್ಕೆ ಸಂತಸ ವ್ಯಕ್ತಪಡಿಸಿದ ದರ್ಶನ್, ರಾಜ ವೀರ ಮದಕರಿ ನಾಯಕ ಚಿತ್ರದ ಮುಹೂರ್ತಕ್ಕೆ ಸುಮಲತಾ ಅಮ್ಮ ಚಾಲನೆ ಕೊಟ್ಟಿದ್ದಾರೆ. ಎಲ್ಲಾ ಹಿರಿಯರು ಈ ಚಿತ್ರದಲ್ಲಿ ಸೇರಿದ್ದಾರೆ. ಅವರು ಕೂತ್ಕೊ ಅಂದ್ರೆ ಕುತ್ಕೊಬೇಕು ,ನಿಂತ್ಕೊ ಅಂದ್ರೆ ನಿಂತ್ಕೊಬೇಕು. ಎಲ್ಲರು ನನ್ನ ಸೀನಿಯರ್ಸ್. ಅವರೆಲ್ಲರು ನಮ್ಮ ತಂದೆ ಜೊತೆಗೆ ಕೆಲಸ ಮಾಡಿದ್ದಾರೆ. ಮದಕರಿನಾಯಕನ ಚಿತ್ರಕ್ಕಾಗಿ ದೊಡ್ಡ ಟೀಮ್ ಸೇರಿದ್ದೀವಿ. ಈ ಪಾತ್ರದಿಂದ ಚಿತ್ರ ಇನ್ನಷ್ಟು ಜನರಿಗೆ ಹತ್ತಿರವಾಗಲಿದೆ. ಅಲ್ಲದೆ, ರಾಜಮಾತೆ ಪಾತ್ರದಲ್ಲಿ ಸುಮಲತಾ ಅಂಬರೀಶ್ ನಟಿಸುತ್ತಾರೆ ಎಂದರು.