ಕರ್ನಾಟಕ

karnataka

ಕೇಂದ್ರದ ಸಿಎಬಿ ವಿರುದ್ಧ ವಾಟಾಳ್ ನೂತನ ಪ್ರತಿಭಟನೆ

By

Published : Dec 15, 2019, 8:22 PM IST

ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಅವಶ್ಯಕತೆ ಇರಲಿಲ್ಲ. ಅಲ್ಲದೆ ಈ ಕುರಿತು ಸಮಗ್ರವಾಗಿ ಚರ್ಚೆಯಾಗಲೇ ಇಲ್ಲ ಎಂದು ಕೇಂದ್ರದ ಸಿಎಬಿ ಕಾಯ್ದೆ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್​ ನಾಗರಾಜ್ ಕರಾಳ ದಿನಾಚರಣೆ ಆಚರಿಸುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ.

vatal-nagaraj-protest-against-central-government-cab-act
ಕೇಂದ್ರದ ಸಿಎಬಿ ವಿರುದ್ಧ ವಾಟಾಳ್ ನೂತನ ಪ್ರತಿಭಟನೆ

ಬೆಂಗಳೂರು: ದೇಶದಲ್ಲಿ ಅನೇಕ ಸಮಸ್ಯೆಗಳಿವೆಯೋ ಅವನ್ನು ಬಗೆಹರಿಸುವುದನ್ನ ಬಿಟ್ಟು ತರಾತುರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಅವಶ್ಯಕತೆ ಇರಲಿಲ್ಲ. ಅಲ್ಲದೆ ಇದರ ಕುರಿತು ಸಮಗ್ರವಾಗಿ ಚರ್ಚೆಯಾಗಲೇ ಇಲ್ಲವೆಂದು ಕೇಂದ್ರದ ಸಿಎಬಿ ಕಾಯ್ದೆ ವಿರುದ್ಧ ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕರಾಳ ದಿನಾಚರಣೆ ಆಚರಿಸುವ ಮೂಲಕ ವಿರೋಧ ವ್ಯಕ್ತಪಡಿಸಿದರು.

ಕೇಂದ್ರದ ಸಿಎಬಿ ವಿರುದ್ಧ ವಾಟಾಳ್ ನೂತನ ಪ್ರತಿಭಟನೆ

ನಗರದಲ್ಲಿಂದು ಕನ್ನಡ ಚಳವಳಿ‌ ವಾಟಾಳ್ ಪಕ್ಷದ ವತಿಯಿಂದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಭೂತದ ಪ್ರತಿಕೃತಿ ದಹಿಸಿದರು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತ ದಹನ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರೋಧಿಯಾಗಿದ್ದು, ಅಲ್ಪಸಂಖ್ಯಾತರಿಗೆ ತೊಂದರೆಯಾಗಬಾರದೆಂದು ಘೋಷಣೆ ಕೂಗಿದರು. ಅಲ್ಲದೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಉಳಿಯಲೇಬೇಕು ಎಂದು ಒತ್ತಾಯಿಸಿದರು.‌

For All Latest Updates

TAGGED:

ABOUT THE AUTHOR

...view details