ಕರ್ನಾಟಕ

karnataka

ETV Bharat / city

ಲಗೇಜ್ ಬ್ಯಾಗ್​​​ಗ​ಳಲ್ಲಿ ಡ್ರಗ್ಸ್‌ ಸಾಗಾಟ : ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್​​ಗಳ ಬಂಧನ - ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್​​ಗಳ ಬಂಧನ

ಪ್ರಯಾಣಿಕರ ಸೋಗಿನಲ್ಲಿ ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ಸಾರ್ವಜನಿಕವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 6.5 ಲಕ್ಷ ರೂ. ಮೌಲ್ಯದ 21.5 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Two drug peddlers arrested
ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್​​ಗಳ ಬಂಧನ

By

Published : Jul 31, 2021, 5:20 PM IST

ಬೆಂಗಳೂರು :ಪ್ರಯಾಣಿಕರ ಸೋಗಿನಲ್ಲಿ ಲಗೇಜ್ ಬ್ಯಾಗ್ ಮೂಲಕ ಹೊರ ರಾಜ್ಯದಿಂದ ಬಂದು ಡ್ರಗ್ಸ್‌ ಸಾಗಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್​​ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ತ್ರಿಪುರ ಮತ್ತು ಬಿಹಾರದಿಂದ ಡ್ರಗ್ಸ್‌ ಸಾಗಾಟ ನಡೆಸುತ್ತಿದ್ದರು. ಗಾಂಜಾವನ್ನು ಪ್ಯಾಕೇಟ್ ಮಾದರಿಯಲ್ಲಿ ಸಿದ್ಧಪಡಿಸಿ ಬಳಿಕ ಆ ಪ್ಯಾಕೇಟ್​​ಗಳನ್ನು ಲಗೇಜ್ ಬ್ಯಾಗ್​​ಗಳಲ್ಲಿಟ್ಟು ಸಾಗಾಟ ಮಾಡುತ್ತಿದ್ದರು.

ಪ್ರಯಾಣಿಕರ ಸೋಗಿನಲ್ಲಿ ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ಸಾರ್ವಜನಿಕವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 6.5 ಲಕ್ಷ ರೂ. ಮೌಲ್ಯದ 21.5 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details