ಕರ್ನಾಟಕ

karnataka

ETV Bharat / city

ಜೀವಂತ ಮೊಸಳೆ ಮರಿ ಮಾರಾಟ ಯತ್ನ: ಬೆಂಗಳೂರಲ್ಲಿ ಇಬ್ಬರ ಬಂಧನ - ಇಬ್ಬರು ಆರೋಪಿಗಳ ಬಂಧನ

ಮೊಸಳೆ ಮರಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

baby crocodile
ಮೊಸಳೆ ಮರಿ

By

Published : Dec 10, 2021, 7:50 AM IST

ಬೆಂಗಳೂರು:ನೀರಿನ ಕ್ಯಾನ್‌ನಲ್ಲಿ ಇಟ್ಟು ಜೀವಂತ ಮೊಸಳೆ ಮರಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ನಗರದ ದಕ್ಷಿಣ ವಿಭಾಗದ ಚನ್ನಮನ ಕೆರೆ(ಸಿ.ಕೆ) ಅಚ್ಚುಕಟ್ಟು ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಜಯನಗರದ ಅಬ್ದುಲ್ ಖಾಲಿದ್ ಹಾಗು ರಾಮನಗರದ ಬೂದಿಗುಪ್ಪೆಯ ಬಿ.ಎಸ್.ಗಂಗಾಧರ್ ಬಂಧಿತರು. ಇವರು ಜೀವಂತ ಮೊಸಳೆ ಮರಿಯನ್ನು ಸಿ.ಕೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಈಶ್ವರಿ ಥಿಯೇಟರ್ ಕಟ್ಟಡದ ಕೆಳಭಾಗದಲ್ಲಿ ನಿಂತು ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಮೊಸಳೆ ಮರಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹೋಟೆಲ್​ನಲ್ಲಿ​ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ.. ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ABOUT THE AUTHOR

...view details