ಕರ್ನಾಟಕ

karnataka

ETV Bharat / city

ಸೇಂದಿ ಮಾರಾಟಕ್ಕೆ ಯತ್ನ.. ಒಬ್ಬನ ಬಂಧನ,ಇನ್ನುಳಿದವರು ಎಸ್ಕೇಪ್​! - ಅಬಕಾರಿ ಪೊಲೀಸರು

ಲಾಕ್​ಡೌನ್​ ನಡುವೆಯೂ ಆಂಧ್ರಪ್ರದೇಶದಿಂದ ಸೇಂದಿ ತಂದು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನ ಅಬಕಾರಿ ಪೊಲೀಸರು ಬಂಧಿಸಿದ್ದು,ಇನ್ನೂ ಕೆಲವರು ಪರಾರಿಯಾಗಿದ್ದಾರೆ.

toddy Sale: One's Arrested, Others Escape!
ಸೇಂದಿ ಮಾರಾಟಕ್ಕೆ ಯತ್ನ: ಒಬ್ಬನ ಬಂಧನ,ಇನ್ನುಳಿದವರು ಎಸ್ಕೇಪ್​!

By

Published : Apr 5, 2020, 4:51 PM IST

ಬೆಂಗಳೂರು :ಲಾಕ್​ಡೌನ್​ ನಡುವೆಯೂ ಆಂಧ್ರಪ್ರದೇಶದಿಂದ ಸೇಂದಿ ತಂದು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನ ಅಬಕಾರಿ ಪೊಲೀಸರು ಬಂಧಿಸಿದ್ದಾರೆ.

ಕೊರೊನಾ ಭೀತಿಯಿಂದ ದೇಶದಾದ್ಯಂತ ಲಾಕ್​ಡೌನ್​ ಮಾಡಲಾಗಿದೆ. ಈ ಹಿನ್ನೆಲೆ ನಗರದಲ್ಲಿ ಮದ್ಯ ಸಿಗುತ್ತಿಲ್ಲ. ಈ ಸಂದರ್ಭವನ್ನೇ ಬಳಸಿ ಗ್ಯಾಂಗ್‌ವೊಂದು ಹೆಣ್ಣೂರು-ಬಾಗಲೂರು ರಸ್ತೆ ಮಾರ್ಗವಾಗಿ ಸೇಂದಿ ತಂದು ಸಿಲಿಕಾನ್ ಸಿಟಿಯ ಹಲವೆಡೆ ಮಾರಾಟ ಮಾಡಲು ಮಂದಾಗಿತ್ತು.

ಈ ಮಾಹಿತಿ ತಿಳಿದಿದ್ದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರವೀಣ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಮತ್ತೆ ಕೆಲವರು ಎಸ್ಕೇಪ್ ಆಗಿದ್ದಾರೆ. ‌ದಾಳಿ ವೇಳೆ 40 ಲೀಟರ್​ ಸೇಂದಿಯನ್ನ ವಶಕ್ಕೆ ಪಡೆದು ಬಂಧಿತ ಆರೋಪಿಯನ್ನ ವಿಚಾರಣೆಗೊಳಪಡಿಸಿದ್ದಾರೆ ಪೊಲೀಸರು.

ABOUT THE AUTHOR

...view details