ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 26,962 ಮಂದಿಗೆ ಸೋಂಕು: 190 ಸೋಂಕಿತರ ಸಾವು.. ಬೆಂಗಳೂರಲ್ಲೇ 124 ಮಂದಿ ಬಲಿ - ಕೊರೊನಾ ವರದಿ

ಇಂದು ನಗರದಲ್ಲಿ 4727 ಮಂದಿ ಗುಣಮುಖರಾಗಿದ್ದು, 16,662 ಜನ ಕೋವಿಡ್ ಸೋಂಕಿತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624ಕ್ಕೆ ಏರಿಕೆಯಾಗಿದೆ..

ಕೊರೊನಾ
ಕೊರೊನಾ

By

Published : Apr 23, 2021, 8:15 PM IST

Updated : Apr 23, 2021, 8:23 PM IST

ಬೆಂಗಳೂರು :ರಾಜ್ಯದಲ್ಲಿಂದು 26,962 ಮಂದಿಗೆ ಕೊರೊನಾ ತಗುಲಿದೆ‌.‌ ಈ ಮೂಲಕ ಸೋಂಕಿತರ ಸಂಖ್ಯೆ 12,74,959ಕ್ಕೆ ಏರಿಕೆ ಆಗಿದೆ. ಇಂದು 190 ಸೋಂಕಿತರು ಮೃತಪಟ್ಟಿದಾರೆ. ಈ ಮೂಲಕ ಸಾವಿನ ಸಂಖ್ಯೆ 14,075 ಕ್ಕೆ ಏರಿಕೆ ಆಗಿದೆ.

ಇತ್ತ 8,697 ಮಂದಿ ಗುಣಮುಖರಾಗಿದ್ದು, ಈ ತನಕ 10,46,554 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಮತ್ತೆ ಸಕ್ರಿಯ ಪ್ರಕರಣಗಳು 2,14,311ಕ್ಕೆ ಏರಿದ್ದು, 1128 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 15.19ರಷ್ಟು ಇದ್ದು, ಸಾವಿನ‌ ಶೇಕಡವಾರು ಪ್ರಮಾಣ ಶೇ.0.70 ರಷ್ಟು‌ ಇದೆ.‌ ವಿಮಾನ ನಿಲ್ದಾಣದಿಂದ 2227 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದು, ಅವರನ್ನ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.

ಒಂದೇ ದಿನದಲ್ಲಿ ಬೆಂಗಳೂರಲ್ಲಿ 124 ಮಂದಿ ಕೋವಿಡ್​ಗೆ ಬಲಿ - 4727 ಜನ ಡಿಸ್ಚಾರ್ಜ್​
ನಗರದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 124 ಮಂದಿ ಕೋವಿಡ್​ನಿಂದ ಮೃತಪಟ್ಟಿದ್ದಾರೆ. ಮರಣ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ರಾಜ್ಯದಲ್ಲಿ ಮರಣ ಪ್ರಮಾಣ ಶೇ.0.70 ಪ್ರಮಾಣ ಇದೆ.

ಇಂದು ನಗರದಲ್ಲಿ 4727 ಮಂದಿ ಗುಣಮುಖರಾಗಿದ್ದು, 16,662 ಜನ ಕೋವಿಡ್ ಸೋಂಕಿತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624ಕ್ಕೆ ಏರಿಕೆಯಾಗಿದೆ.

Last Updated : Apr 23, 2021, 8:23 PM IST

ABOUT THE AUTHOR

...view details