ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿಂದು 315 ಮಂದಿಯಲ್ಲಿ ಕೊರೊನಾ ದೃಢ.. ಇಬ್ಬರು ಸೋಂಕಿಗೆ ಬಲಿ.. - ರಾಜ್ಯದಲ್ಲಿ ಕೊರೋನಾರ್ಭಟ ಮುಂದುವರಿಕೆ

ರಾಜ್ಯದಲ್ಲಿಂದು 77,818 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 315 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ, ಇಬ್ಬರು ಮೃತಪಟ್ಟಿದ್ದಾರೆ..

corona virus cases
ಕೊರೋನಾ

By

Published : Nov 28, 2021, 8:08 PM IST

ಬೆಂಗಳೂರು :ರಾಜ್ಯದಲ್ಲಿಂದು 77,818 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 315 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ, ಇಬ್ಬರು ಮೃತಪಟ್ಟಿದ್ದಾರೆ.

ಈ ಮೂಲಕ ಸೋಂಕಿತರ ಸಂಖ್ಯೆ 29,95,600ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 236 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಒಟ್ಟು 29,50,542 ಮಂದಿ ಸೋಂಕಿನಿಂದ ಗುಣಮುಖರಾದಂತಾಗಿದೆ.

ಭಾನುವಾರ ಇಬ್ಬರು ಸೋಂಕಿತರು ಮೃತಪಡುವುದರೊಂದಿಗೆ, ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಸದ್ಯ ಸಕ್ರಿಯ ಪ್ರಕರಣಗಳು 6,831 ಇವೆ. ಸೋಂಕಿತರ ಪ್ರಮಾಣ ಶೇ.0.40, ಸಾವಿನ ಪ್ರಮಾಣ 0.63% ನಷ್ಟು ಇದೆ.

ಬೆಂಗಳೂರಲ್ಲೇ 152 ಮಂದಿಗೆ ಸೋಂಕು

ರಾಜಧಾನಿ ಬೆಂಗಳೂರಿನಲ್ಲಿ 152 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 12,56,136 ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 142 ಜನರು ಗುಣಮುಖರಾಗಿದ್ದು, 12,34,519 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,329 ಇದೆ. ಸಕ್ರಿಯ 5287 ಪ್ರಕರಣಗಳು ಇದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details