ಕರ್ನಾಟಕ

karnataka

ETV Bharat / city

ಸಿದ್ದರಾಮಯ್ಯ, ಡಿಕೆಶಿ, ಹೆಚ್​ಡಿಕೆ, ಲಲಿತಾ ನಾಯಕ್, ದೇವನೂರು ಮಹಾದೇವ್ ಸೇರಿ ಹಲವರಿಗೆ ಮತ್ತೆ ಬೆದರಿಕೆ ಪತ್ರ

ಸಿದ್ದರಾಮಯ್ಯ, ಡಿಕೆಶಿ, ಹೆಚ್​ಡಿಕೆ, ಬಿಟಿ ಲಲಿತಾ ನಾಯಕ್, ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಸೇರಿ ಹಲವರಿಗೆ ಮತ್ತೆ ಬೆದರಿಕೆ ಹಾಕಲಾಗಿದೆ.

ಬೆದರಿಕೆ ಪತ್ರ
ಬೆದರಿಕೆ ಪತ್ರ

By

Published : Jul 17, 2022, 8:30 PM IST

ಬೆಂಗಳೂರು: ಕಳೆದ ಬಾರಿಯ ಮಾದರಿಯಲ್ಲೇ ಈ ಬಾರಿಯೂ ಸಾಹಿತಿಗಳು ಹಾಗೂ ರಾಜಕಾರಣಿಗಳಿಗೆ ಬೆದರಿಕೆ ಪತ್ರ ಬಂದಿದೆ. ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್​​​ಗೆ ಅನಾಮಿಕ ಪತ್ರ ಬಂದಿದ್ದು, ಅದರಲ್ಲಿ ಅವರದ್ದೂ ಸೇರಿದಂತೆ ಹಲವು ನಾಯಕರ, ಸಾಹಿತಿಗಳ ಫೋಟೋ ಅಂಟಿಸಿ ಬೆದರಿಕೆ ಹಾಕಲಾಗಿದೆ.

ಪತ್ರದಲ್ಲಿ ಸಾಹಿತಿ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ಎಸ್ ಜಿ ಸಿದ್ದರಾಮಯ್ಯ, ಜ್ಞಾನಪ್ರಕಾಶ ಸ್ವಾಮೀಜಿ, ಬಿ.ಟಿ.ಲಲಿತಾ ನಾಯಕ್, ಲೀನಾ, ಮಹುವಾ ಮೊಯಿತ್ರಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕಪಿಲ್ ಸಿಬಲ್ ಫೋಟೋ ಅಂಟಿಸಿ ಬೆದರಿಕೆ ಪತ್ರ ಬರೆಯಲಾಗಿದೆ.

ಪತ್ರದಲ್ಲಿ ಭಯೋತ್ಪಾದಕರು ದಾಳಿ ಮಾಡಿದಾಗ ಬಾಯಿ ಬಿಡಲ್ಲ. ಇವರು ದೇಶ ದ್ರೋಹಿಗಳು, ಹಿಂದೂ ದ್ರೋಹಿಗಳು. ಮುಂದಿನ ದಿನಗಳಲ್ಲಿ ಈ ದುರ್ಬುದ್ಧಿಯ ತಿಳಿಗೇಡಿಗಳ ದುರ್ಮರಣಕ್ಕೆ ಸತ್ಯ ಎಂದು ಉಲ್ಲೇಖ ಮಾಡಲಾಗಿದೆ. ಸೈನಿಕರ ಬಗ್ಗೆ ಹಗುರವಾಗಿ ಮಾತಾಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ನಾನು ಪತ್ರ ಬರೆದಿದ್ದೆ. ಆದರೆ ನೀವು ಆ ಪತ್ರವನ್ನು ಕೊಲೆ ಬೆದರಿಕೆ ಎಂದು ಕೇಸ್ ದಾಖಲು ಮಾಡಿದ್ದೀರಿ. ಹಾಗಾಗಿ ಈ ಪತ್ರದಲ್ಲಿ ಬೆದರಿಕೆ ಹಾಕುತ್ತಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.

ಬೆದರಿಕೆ ಪತ್ರ

ಈ ಪತ್ರವನ್ನು ಬಿ ಟಿ ಲಲಿತಾ ನಾಯಕ್ ಅವರು ಮಾಧ್ಯಮಗಳಿಗೆ ನೀಡಿದ್ದಾರೆ. ಈವರೆಗೂ ಪತ್ರಕ್ಕೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅದೇ ರೀತಿ ಬೆದರಿಕೆ ಪತ್ರ ಸ್ವೀಕರಿಸಿರುವ ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ಸಹ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬಗ್ಗೆ ಮಾಹಿತಿ ಸಿಕ್ಕಿಲ್ಲ.

(ಇದನ್ನೂ ಓದಿ: ಕೆರೂರಿನ ನೊಂದ ಮಹಿಳೆ ಕ್ಷಮೆ ಕೇಳುವ ಅಗತ್ಯವಿರಲಿಲ್ಲ: ಸಿದ್ದರಾಮಯ್ಯ)

ABOUT THE AUTHOR

...view details