ಕರ್ನಾಟಕ

karnataka

ETV Bharat / city

ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್, ಈಗ ಇರೋದ್ ನಕಲಿ ಕಾಂಗ್ರೆಸ್: ಆರ್.ಅಶೋಕ್

ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರೋದ್ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್​​ಗೂ ಈಗಿರುವ ಕಾಂಗ್ರೆಸ್​ಗೂ ಸಂಬಂಧವಿಲ್ಲ ಎಂದು ಸಚಿವ ಆರ್.ಅಶೋಕ್ ಕಿಡಿಕಾರಿದರು.

ಅಶೋಕ್
ಅಶೋಕ್

By

Published : Feb 17, 2022, 1:15 PM IST

Updated : Feb 17, 2022, 1:43 PM IST

ಬೆಂಗಳೂರು:ಕೋಳಿನಾ ಕೇಳಿ ಖಾರ ಅರಿಯೋ ಅಭ್ಯಾಸ ಬಿಜೆಪಿಗಿಲ್ಲ. ಮಹಾತ್ಮ ಗಾಂಧೀಜಿ ಇದ್ದಾಗ ಇದ್ದಿದ್ದು ಬೇರೆ ಕಾಂಗ್ರೆಸ್. ಈಗ ಇರೋದ್ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದಲ್ಲಿದ್ದ ಕಾಂಗ್ರೆಸ್​​ಗೂ ಈಗಿರುವ ಕಾಂಗ್ರೆಸ್​ಗೂ ಸಂಬಂಧವಿಲ್ಲ ಎಂದು ಆರ್.ಅಶೋಕ್ ಟೀಕಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಜಾ ಮಾಡುವುದಾದ್ರೆ ಕಾಂಗ್ರೆಸ್​​ನವರನ್ನು ವಜಾ ಮಾಡಬೇಕು. ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಬಾವುಟ ಹಾರಿಸಿ ಎಂದಾಗ ಎಲ್ಲಿದ್ದರು ಇವರು?, ಇದು ಕಾಂಗ್ರೆಸ್​​ನವರ ರಾಜಕೀಯ ದೊಂಬರಾಟ ಅಷ್ಟೇ. ಆರಾಮಾಗಿ ಧರಣಿ ಮಾಡಲಿ. ಮೋದಿ ಬಂದ ಮೇಲೆ ಇವರು ಎಲ್ಲಾ ಕಡೆ ನಿದ್ದೆ ಮಾಡ್ತಿದ್ದಾರೆ. ಎಲ್ಲಾ ಕಡೆ ಕಾಂಗ್ರೆಸ್ ಖಾಲಿ ಆಗ್ತಿದೆ. ಬಿಜೆಪಿ ಇಲ್ಲ ಅಂದಿದ್ರೆ ಕಾಂಗ್ರೆಸ್​​ಗೆ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ಇವರಿಗೆ ಇಟಲಿ ಮೇಲೆ ತುಂಬಾ ಆಸೆ ಎಂದು ಲೇವಡಿ ಮಾಡಿದರು.

ಆರ್.ಅಶೋಕ್ ಪ್ರತಿಕ್ರಿಯೆ

ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರ ಮಾತನಾಡಿ, ಸದನದಲ್ಲಿ ಆರಾಮಗಿ ನಿದ್ದೆ ಮಾಡ್ಲಿ. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡುತ್ತೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್​​ನವರಿಗೆ ನೈತಿಕತೆ ಇಲ್ಲ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ‌ರಾಷ್ಟ್ರಧ್ವಜ ಹಾರಿಸಿದ್ದೇವೆ. ಅಲ್ಪಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ. ಇದೆಲ್ಲಾ ನಾಟಕ,‌ ಶೋ ಅಂತಾ ಕುಮಾರಸ್ವಾಮಿಯೇ ಹೇಳಿದ್ದಾರೆ. ನಿನ್ನೆಯ ಸದನದಲ್ಲಿ ನಡೆದ ವರ್ತನೆ ಕಾಂಗ್ರೆಸ್​​ನ ಗೂಂಡಾಗಿರಿ ಎಂದು ಕಿಡಿಕಾರಿದರು.

ಈಶ್ವರಪ್ಪ ಹೇಳಿರೋದನ್ನು ಪೂರ್ತಿಯಾಗಿ ಕೇಳಬೇಕು. ಅವರು ಹೇಳಿರೋದ್ರಲ್ಲಿ ಆ ಥರದ್ದೇನಿಲ್ಲ. ಸದನದಲ್ಲಿ ಮಾತನಾಡಲಿ, ಧರಣಿ ಮಾಡುವ ಅವಶ್ಯಕತೆ ಏನಿದೆ?. ಇವರಿಗೆ ಪ್ರಚಾರ ಬೇಕು ಅಷ್ಟೆ. ಎತ್ತಿನಗಾಡಿ, ಜಟಕಗಾಡಿ, ಕತ್ತೆ ಮೇಲೆ ಬರ್ತಾರೆ. ಕುಮಾರಸ್ವಾಮಿ ಹೇಳಿದಂಗೆ ಇದು ಟ್ರಯಲ್ ಅಷ್ಟೆ. ನಮಗೂ ಕುಸ್ತಿ ಮಾಡೋಕ್ಕೆ ಬರುತ್ತೆ ಅಂತ ಮಾಡಿದ್ದಾರೆ. ಮಾತನಾಡೋಕ್ಕೆ ಅವಕಾಶ ಕೊಡದೇ ಗೂಂಡಾಗಿರಿ ಮಾಡಿದ್ದಾರೆ‌ ಎಂದರು.

ಇದನ್ನೂ ಓದಿ: ಸ್ಟೆಮ್ ಸೆಲ್ ಕಸಿಯಿಂದ ಏಡ್ಸ್​ ರೋಗ ಗುಣ: ವಿಶ್ವದಲ್ಲಿ ಮಹಿಳೆಯ ಮೊದಲ ಪ್ರಯೋಗ ಯಶಸ್ವಿ

Last Updated : Feb 17, 2022, 1:43 PM IST

ABOUT THE AUTHOR

...view details