ಕರ್ನಾಟಕ

karnataka

ETV Bharat / city

ಖರೀದಿ ನೆಪದಲ್ಲಿ ಚಿನ್ನ ಕದಿಯುತ್ತಿದ್ದ ಕಳ್ಳಿಯ ಬಂಧನ: 2.5 ಲಕ್ಷ ಮೌಲ್ಯದ ಆಭರಣ ವಶ - banglore thief arrested

ಚಿನ್ನ‌‌ ಖರೀದಿಸುವ ನೆಪದಲ್ಲಿ ಆಭರಣದಂಗಡಿಗೆ ಹೋಗಿ ಮಾಲೀಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ.

banglore
ಕಳ್ಳಿಯ ಬಂಧನ

By

Published : Dec 13, 2020, 7:47 PM IST

ಬೆಂಗಳೂರು:ಚಿನ್ನ‌‌ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿಕೊಂಡು ಆಭರಣದಂಗಡಿಗೆ ಹೋಗಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನ ಕದಿಯುತ್ತಿದ್ದ ಕಳ್ಳಿಯನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.

ಆಭರಣದಂಗಡಿಗೆ ಹೋಗಿ ಮಾಲೀಕರ ಗಮನ ಬೇರೆಡೆ ಸೆಳೆದು ಚಿನ್ನ ಕದಿಯುತ್ತಿದ್ದ ಕಳ್ಳಿಯನ್ನು ಬಂಧಿಸಲಾಗಿದೆ.

ಫರ್ವಿನ್ (28) ಬಂಧಿತ ಆರೋಪಿ.‌ ಈಕೆಯಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಕಳೆದ ತಿಂಗಳು 26 ರಂದು ಲಕ್ಷ್ಮೀಪುರದ ಬಂಗಾರದ ಅಂಗಡಿಯಲ್ಲಿ ಚಿನ್ನ‌ ಕದ್ದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಈಕೆಯನ್ನು ವಶಕ್ಕೆ‌ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

ಓದಿ: ಗೌಪ್ಯವಾಗಿರಲಿ ನಿಮ್ಮ ಬ್ಯಾಂಕ್​ ಮಾಹಿತಿ: ವಂಚಕರ ಟಾರ್ಗೆಟ್​ ನೀವೇ ಆಗಿರಬಹುದು!

ಫರ್ವಿನ್ ಮತ್ತೋರ್ವ ಮಹಿಳೆಯೊಬ್ಬಳ ಜೊತೆಗೂಡಿ ಜ್ಯುವೆಲ್ಲರಿ ಶಾಪ್​ಗೆ ತೆರಳಿ ಚಿನ್ನದ ಸರದ ಬಗ್ಗೆ ವಿಚಾರಿಸಿದ್ದಾಳೆ. ವಿವಿಧ ಶೈಲಿಯ ಸರಗಳನ್ನು ಮಾಲೀಕ ತೋರಿಸಿದ್ದಾನೆ. ಖರೀದಿ ಸೋಗಿನಲ್ಲಿ ಚಿನ್ನವನ್ನು ಕೈಗೆತ್ತಿಕೊಂಡಿದ್ದಾರೆ. ಮಾಲೀಕನ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಸರ ಲಪಾಟಿಯಿಸಿದ್ದಾರೆ. ಬಳಿಕ ಮತ್ತೊಮ್ಮೆ ಚಿನ್ನ‌‌ ಖರೀದಿಸುವುದಾಗಿ ಹೇಳಿ ಕಾಲ್ಕಿತ್ತಿದ್ದಾರೆ. ಅದೇ ಚಿನ್ನ‌ವನ್ನು ಬೇರೆ ಕಡೆ ಮಾರಾಟ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಇನ್ನು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.‌ ಕಳ್ಳಿಯ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details