ಬೆಂಗಳೂರು:ನಗರದಲ್ಲೆಡೆಯೂ ನೂತನ ಮೋಟಾರು ವಾಹನ ಕಾಯ್ದೆಯದ್ದೇ ಮಾತು. ಕಾಯ್ದೆ ಜಾರಿಯಾದ ಮೊದಲ ದಿನವೇ (ಸೆಪ್ಟೆಂಬರ್ 1) ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸವಾರರನ್ನು ಸಂಚಾರಿ ಪೊಲೀಸರು ಭರ್ಜರಿ ಭೇಟೆಯಾಡಿದರು. ಅದಕ್ಕೆ ಪೊಲೀಸ್ ಇಲಾಖೆ ಸವಾರರು ವಾಹನದ ಮೂಲ ದಾಖಲೆಗಳನ್ನು ತಮ್ಮಲಿಯೇ ಇಟ್ಟುಕೊಳ್ಳಬೇಕಾ ಅಥವಾ ಬೇಡವಾ ಎಂಬುದಕ್ಕೆ ಪರಿಹಾರ ಸೂಚಿಸಿದೆ.
ಹೊಸ ಸಂಚಾರಿ ನಿಯಮ ಅಧಿಕೃತವಾಗಿ ಜಾರಿಯಾದಾಗಿನಿಂದ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಈ ಹಿಂದೆ ನಿಯಮಗಳನ್ನ ಉಲ್ಲಂಘಿಸಿದವರು ಪೊಲೀಸರಿಗೆ ಸಿಕ್ಕಿಬಿದ್ದರೆ, ಮೂಲ ದಾಖಲೆಗಳು ಇರಬೇಕಿರಲಿಲ್ಲ. ಜೆರಾಕ್ಸ್ ಪ್ರತಿಗಳನ್ನೂ ತೋರಿಸಬಹುದಿತ್ತು. ಆದರೀಗ ನಿಯಮ ಬದಲಾದ ಕಾರಣ ಮೂಲ ದಾಖಲೆಗಳು ಇರಲೇಬೇಕು ಎನ್ನುತ್ತಿದ್ದಾರೆ ಸಂಚಾರಿ ಪೊಲೀಸರು.