ಕರ್ನಾಟಕ

karnataka

ETV Bharat / city

ಬಹು ಭಾಷೆ, ಬಹು ಸಂಸ್ಕೃತಿ ಗೌರವಿಸಿ: ಕೇಂದ್ರದ ವಿರುದ್ಧ ದಿನೇಶ್ ಗುಂಡೂರಾವ್ ಟ್ವೀಟ್

ಮೋದಿ ಸರ್ಕಾರ ಹಿಂದಿ ಭಾಷಿಗರ ಸರ್ಕಾರದಂತೆ ವರ್ತಿಸುವುದನ್ನು ನಿಲ್ಲಿಸಲಿ. 'ಬಹು ಭಾಷೆ, ಬಹು ಸಂಸ್ಕೃತಿ'ಯ ವೈವಿಧ್ಯತೆಯನ್ನು ಗೌರವಿಸಲಿ ಎಂದು ಕೇಂದ್ರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ಹೊರಹಾಕಿದ್ದಾರೆ.

ದಿನೇಶ್ ಗುಂಡೂರಾವ್

By

Published : Jun 3, 2019, 8:29 PM IST

ಬೆಂಗಳೂರು: ದೇಶಾದ್ಯಂತ ಶಾಲೆಗಳಲ್ಲಿ ತ್ರಿಭಾಷಾ ಶಿಕ್ಷಣ ವ್ಯವಸ್ಥೆ ಜಾರಿ ಸಂಬಂಧಿಸಿ ಕೇಂದ್ರ ಸರ್ಕಾರ ಪ್ರಸ್ತಾವ ಹಿಂಪಡೆಯುವ ನಿರ್ಧಾರ ಕೈಗೊಂಡ ನಂತರವೂ ಕಾಂಗ್ರೆಸ್ ಅಸಮಾಧಾನ ಮುಂದುವರಿದಿದೆ.

ಇಂದು ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್​
ದಿನೇಶ್ ತಮ್ಮ ಟ್ವೀಟ್​ನಲ್ಲಿ ಒಂದು ಭಾಷೆ, ಒಂದು ಸಂಸ್ಕೃತಿಯ ಹೆಸರಲ್ಲಿ ಅನಿವಾರ್ಯವಲ್ಲದ ಹಿಂದಿ ಭಾಷೆಯನ್ನು ನರೇಂದ್ರ ಮೋದಿ ಸರ್ಕಾರವು ದಕ್ಷಿಣ ಭಾರತೀಯರ ಮೇಲೆ ಹೇರುತ್ತಿರುವುದು ಖಂಡನೀಯ.

ಮೋದಿ ಸರ್ಕಾರ ಹಿಂದಿ ಭಾಷಿಗರ ಸರ್ಕಾರದಂತೆ ವರ್ತಿಸುವುದನ್ನು ನಿಲ್ಲಿಸಲಿ. 'ಬಹು ಭಾಷೆ, ಬಹು ಸಂಸ್ಕೃತಿ'ಯ ವೈವಿಧ್ಯತೆಯನ್ನು ಗೌರವಿಸಲಿ ಎಂದಿದ್ದಾರೆ

ABOUT THE AUTHOR

...view details