ಬೆಂಗಳೂರು: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಾದರಿ ಬಾಡಿಗೆ ಕಾಯ್ದೆ-2021 ಅನ್ನು ಅನುಮೋದನೆ ನೀಡಲಾಗಿದೆ. ಹೊಸದಾಗಿ ರೂಪುಗೊಂಡ ಕಾಯಿದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಬಾಡಿಗೆಯ ಮುಂಗಡವು ಎರಡು ತಿಂಗಳುಗಳನ್ನು ಮೀರಬಾರದು ಎಂಬುದು ಮಾಲೀಕರು ಮತ್ತು ಬಾಡಿಗೆದಾರರು ಇಬ್ಬರೂ ನಡುವಿನ ಪ್ರಮುಖ ಅಂಶ.
ಕಾಯ್ದೆ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕರು, ಬಾಡಿಗೆಯ ಮುಂಗಡ ಕಡಿತಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಕ್ರೆಡೈ ಅಧ್ಯಕ್ಷ ಸುರೇಶ್ ಪ್ರಭು, ಕೇಂದ್ರ ಸರ್ಕಾರ ಸರ್ಕಾರ ಅನುಮೋದನೆ ನೀಡಿ ಮಾದರಿ ಬಾಡಿಗೆ ಕಾಯ್ದೆ ಜಾರಿ ಮಾಡುವುದನ್ನು ರಾಜ್ಯಗಳಿಗೆ ಬಿಟ್ಟಿರುವ ನಿರ್ಧಾರವೂ ಮಿಶ್ರ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದ್ದಾರೆ.