ಕರ್ನಾಟಕ

karnataka

By

Published : Aug 21, 2019, 2:24 PM IST

ETV Bharat / city

ನೆರೆಗೆ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಕೂಡ ಕೊಟ್ಟಿಲ್ಲ: ಹೆಚ್​ಡಿಡಿ ಅಸಮಾಧಾನ

ಈ ಬಾರಿಯ ನೆರೆ ಅನಾಹುತಕ್ಕೆ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಕೂಡ ಕೊಟ್ಟಿಲ್ಲ. ಕುಮಾರಸ್ವಾಮಿ ಕಾಲದಲ್ಲಿ ಸುಮಾರು 100 ತಾಲೂಕುಗಳಲ್ಲಿ ಬರ ಬಂದಿತ್ತು. ಆಗ ಪರಿಹಾರ ಕೊಡಬೇಕೆಂದು 3 ಸಾವಿರ ಕೋಟಿ ರೂ. ಪರಿಹಾರಕ್ಕೆ ಮೈತ್ರಿ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು. ಮೈತ್ರಿ ಸರ್ಕಾರದ ಮನವಿ ಮೇರೆಗೆ 1,029 ಕೋಟಿ ಕೊಟ್ಟಿದ್ದಾರೆ ಅಷ್ಟೇ. ಈ ಬಾರಿಯ ನೆರೆಗೆ ಕೇಂದ್ರ ಸರ್ಕಾರ ಏನೇನು ಕೊಟ್ಟಿಲ್ಲ. ಇಂದು ಹಿಂದಿನ ಬರಗಾಲದ ಪರಿಸ್ಥಿತಿಗೆ ಕೊಟ್ಟಿರುವ ಅನುದಾನ ಎಂದು ಹೆಚ್.ಡಿ ದೇವೇಗೌಡರು ಹೇಳಿದರು.

ಹೆಚ್.ಡಿ ದೇವೇಗೌಡ

ಬೆಂಗಳೂರು : ಈ ಬಾರಿಯ ನೆರೆಗೆ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನು ಸಹ ಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್​ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನರೇಗ ಯೋಜನೆಯಡಿ 1,700 ಕೋಟಿ ರೂ. ಕೇಂದ್ರ ಸರ್ಕಾರ ಕೊಡಬೇಕು. ಅದನ್ನು ಬಿಡುಗಡೆ ಮಾಡಿಲ್ಲ. ಹಿಂದೆ ಕುಮಾರಸ್ವಾಮಿ ಅವರು ಕೂಲಿ ಕಾರ್ಮಿಕರಿಗೆ ತೊಂದರೆ ಇದೆ ಅಂತ ಆ ಹಣವನ್ನು ರಾಜ್ಯ ಸರ್ಕಾರದ ಮೂಲಕವೇ ಕೊಟ್ಟಿದ್ದಾರೆ ಎಂದರು.

ಇನ್ನು ಕೇಂದ್ರದಿಂದ ನೆರೆ ಪರಿಹಾರಕ್ಕೆ 2,029 ಕೋಟಿ ರೂ. ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ಈ ಬಾರಿಯ ನೆರೆ ಅನಾಹುತಕ್ಕೆ ಕೇಂದ್ರ ಸರ್ಕಾರ ಒಂದು ನಯಾ ಪೈಸೆ ಕೂಡ ಕೊಟ್ಟಿಲ್ಲ. ಕುಮಾರಸ್ವಾಮಿ ಕಾಲದಲ್ಲಿ ಸುಮಾರು 100 ತಾಲೂಕುಗಳಲ್ಲಿ ಬರ ಬಂದಿತ್ತು. ಕುಡಿಯೋದಕ್ಕೆ ನೀರು ಇಲ್ಲದಂತಹ ಕಾಲದಲ್ಲಿ ಪರಿಹಾರ ಕೊಡಬೇಕೆಂದು 3 ಸಾವಿರ ಕೋಟಿ ರೂ. ಪರಿಹಾರಕ್ಕೆ ಮೈತ್ರಿ ಸರ್ಕಾರ, ಕೇಂದ್ರಕ್ಕೆ ಮನವಿ ಮಾಡಿಕೊಂಡಿತ್ತು. ಅದು ಲೋಕಸಭೆ ಚುನಾವಣೆಗೆ ಮುಂಚೆ. ಮೈತ್ರಿ ಸರ್ಕಾರದ ಮನವಿ ಮೇರೆಗೆ 1,029 ಕೋಟಿ ಕೊಟ್ಟಿದ್ದಾರೆ ಅಷ್ಟೇ. ಈ ಬಾರಿಯ ನೆರೆಗೆ ಕೇಂದ್ರ ಸರ್ಕಾರ ಏನೇನು ಕೊಟ್ಟಿಲ್ಲ. ಈಗ ಬಿಡುಗಡೆಯಾಗಿರುವುದು ಹಿಂದಿನ ಬರಗಾಲದ ಪರಿಸ್ಥಿತಿಗೆ ಕೊಟ್ಟಿರುವ ಅನುದಾನ ಎಂದು ಹೇಳಿದರು.

ವಾಜಪೇಯಿ ಕಾಲದಲ್ಲಿ ಬರ ಮತ್ತು ನೆರೆ ಬಂದ ಸಂದರ್ಭದಲ್ಲಿ 2,500 ಜನರನ್ನು ನಾನು ದೆಹಲಿಗೆ ಕರೆದುಕೊಂಡು ಹೋಗಿದ್ದೆ. ನನಗೆ ಹೋರಾಟ ಗೊತ್ತಿದೆ. ಯಾರಿಗೂ ಹೆದರಬೇಕಿಲ್ಲ. ಭಯಪಡುವ ಅಗತ್ಯ ಇಲ್ಲ ಎಂದರು.

ಇನ್ನು ಕಾಂಗ್ರೆಸ್​ನ ಕೆಲವು ಮಿತ್ರರು ಮೈತ್ರಿ ಸರ್ಕಾರ ಉರುಳಿಸಬೇಕೆಂದಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿರುವುದು ಕೆಲವರಿಗೆ ನೋಡಲಿಕ್ಕೆ ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.

ABOUT THE AUTHOR

...view details