ಬೆಂಗಳೂರು:ಕಾಲೇಜು ಹಬ್ಬ ಅಂದ್ರೆ ಅಲ್ಲಿ ಪಾಶ್ಚಾತ್ಯ ಹಾಡುಗಳದ್ದೇ ಅಬ್ಬರ ಜೋರಾಗಿರುತ್ತೆ. ಆದ್ರೆ ಇದಕ್ಕೆ ತದ್ವಿರುದ್ಧ ಎಂಬಂತೆ ನಗರದ ಅಂಬೇಡ್ಕರ್ ರಸ್ತೆಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಜಾನಪದ ಕಲಾ ಲೋಕವೇ ಅನಾವರಣಗೊಂಡಿತ್ತು.
ಕಲಾ ಸಂಭ್ರಮದಲ್ಲಿ ಮಿಂದೆದ್ದ ವಿದ್ಯಾರ್ಥಿಗಳು... ಜಾನಪದ ಲೋಕ ಅನಾವರಣ - 30ಕ್ಕೂ ಹೆಚ್ಚಿನ ಕಾಲೇಜುಗಳ ವಿದ್ಯಾರ್ಥಿಗಳು ಈ ಸ್ಪರ್ಧೆ
ಕಾಲೇಜು ಹಬ್ಬ ಅಂದರೆ ಅಲ್ಲಿ ಪಾಶ್ಚಾತ್ಯ ಹಾಡುಗಳದ್ದೇ ಅಬ್ಬರ ಜೋರಾಗಿ ಇರುತ್ತೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಗರದ ಅಂಬೇಡ್ಕರ್ ರಸ್ತೆ ಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ಜನಪದ ಕಲಾ ಲೋಕವೇ ಅನಾವರಣಗೊಂಡಿತ್ತು.
ಕಾಲೇಜು ಆವರಣವೆಲ್ಲವೂ ಕನ್ನಡಮಯವಾಗಿ, ಹುಡುಗರು ಪಂಚೆ ಶರ್ಟ್ ಹಾಕೊಂಡು ಮಿಂಚಿದರೆ, ಇತ್ತ ಹುಡುಗಿಯರು ರೇಷ್ಮೆ ಸೀರೆಯನ್ನುಟ್ಟು ಮಿಂಚಿದರು. ಅಂದಹಾಗೇ, ಸರ್ಕಾರಿ ಕಲಾ ಕಾಲೇಜಿನಲ್ಲಿ ಕಲಾ ಸಂಭ್ರಮ- 2020 ನಾಡು-ನುಡಿ ಜಾನಪದ ಸಂಗಮ ಎಂಬ ಶಿರ್ಷಿಕೆಯಡಿ ಅಂತರ್ ಕಾಲೇಜು ನೃತ್ಯ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.
ಸಮೂಹ ಜಾನಪದ ಗಾಯನ, ನೃತ್ಯ, ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಪಾಠಕ್ಕೆ ವಿರಾಮ ಹಾಕಿ, ನಾಡಿನ ಕಲೆ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿದರು. ಜಾನಪದ ನೃತ್ಯಕ್ಕೆ ತಲೆಬಾಗಿ ತಾವು ಕೂಡ ನಿಂತಲ್ಲೇ ಕುಣಿದು ಕುಪ್ಪಳಿಸಿದರು. ಸುಮಾರು 60ಕ್ಕೂ ಹೆಚ್ಚು ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.