ಬೆಂಗಳೂರು:ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳಿರುವ ವಿದೇಶಿಗರು ಹಾಗೂ ರಾಜ್ಯದ ಜನರನ್ನು ಪತ್ತೆ ಮಾಡಲಾಗುತ್ತಿದೆ. ಇನ್ನು ಪತ್ತೆಯಾದವರ ಮೇಲೆ ನಿಗಾ ಇರಿಸಲು ರಾಜ್ಯಮಟ್ಟದ ತಂಡ ರಚಿಸುವುದಾಗಿ ಗೃಹ ಇಲಾಖೆ ಪ್ರಕಟಿಸಿದೆ.
ದೆಹಲಿಯಲ್ಲಿ ಮಾರ್ಚ್ 7, 8, 9 ಮತ್ತು 15, 16, 17ರಂದು 3,000ಕ್ಕಿಂತ ಹೆಚ್ಚು ಮಂದಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ವಿದೇಶಿಗರೂ ಭಾಗವಹಿಸಿದ್ದರು. ಈ ಎರಡು ಸಭೆಗಳ ನಂತರ ಇವರು ರಾಷ್ಟ್ರಾದ್ಯಂತ ಪ್ರಯಾಣ ಬೆಳೆಸಿದ್ದಾರೆ.