ಕರ್ನಾಟಕ

karnataka

ETV Bharat / city

ಕೆ.ಆರ್‌.ಪುರ: ಶ್ರೀ ಕೋಟೆ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ವೈಭವ

ಕೃಷ್ಣರಾಜಪುರದ ಪುರಾತನ ಪ್ರಸಿದ್ಧ ಶ್ರೀ ಕೋಟೆ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ನಿನ್ನೆ ಅತ್ಯಂತ ಅದ್ಧೂರಿಯಾಗಿ ನಡೆಯಿತು.

ಶ್ರೀ ಕೋಟೆ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ
ಶ್ರೀ ಕೋಟೆ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ

By

Published : May 15, 2022, 11:13 AM IST

ಕೆ.ಆರ್.ಪುರ: 16 ವರ್ಷಗಳಿಂದ ಸ್ಥಗಿತಗೊಂಡಿದ್ದ ಪುರಾತನ ಪ್ರಸಿದ್ಧ ಕೃಷ್ಣರಾಜಪುರದ ಶ್ರೀ ಕೋಟೆ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ವೈಭವದಿಂದ ನಡೆಯಿತು. ಅಭಿಜಿನ್ ಮುಹೂರ್ತದಲ್ಲಿ ಸಾವಿರಾರು ಭಕ್ತ ಸಮೂಹದ ಜೊತೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ವಿಶೇಷ ಪೂಜೆ ನೆರವೇರಿಸಿ, ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.

ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ವೆಂಕಟರಮಣ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ, ಅಲಂಕಾರ, ಹೋಮ ಹವನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ಬ್ರಹ್ಮರಥೋತ್ಸವವನ್ನು ಕೆ.ಆರ್.ಪುರ, ಕುಂಬಾರ ಬೀದಿ, ಕಾಲೇಜು ರಸ್ತೆ, ಹಳೆ ಪೋಸ್ಟ್ ಆಫೀಸ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಂಗಳ ವಾದ್ಯ, ವೀರಗಾಸೆ , ಪೂಜಾ ಕುಣಿತ, ಬ್ಯಾಂಡ್ ಸೆಟ್ ಕೀಲು ಕುದುರೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.


ಕೋಟೆ ವೆಂಕಟರಮಣ ಸ್ವಾಮಿ, ಕಾಶಿ ವಿಶ್ವೇಶ್ವರ ಸ್ವಾಮಿ ಮತ್ತು ಕೋಟೆ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.

ಇದನ್ನೂ ಓದಿ:ಉಡುಪಿಗೆ ಬಂದು 18 ತಿಂಗಳ ಹಿಂದೆ ಮಣ್ಣು ಮಾಡಿದ್ದ ಶವ ಹೊರತೆಗೆಸಿದ ಪಂಜಾಬ್ ಪೊಲೀಸರು

ABOUT THE AUTHOR

...view details