ಕರ್ನಾಟಕ

karnataka

ETV Bharat / city

ಒಮಿಕ್ರಾನ್ ಭೀತಿ ; ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಮುನ್ನವೇ ಸೋಂಕಿತ ವ್ಯಕ್ತಿ ಎಸ್ಕೇಪ್

ನ.20 ರಂದು ಬೆಂಗಳೂರಿಗೆ ಬಂದ ಕೋವಿಡ್‌ ಸೋಂಕಿತ ವ್ಯಕ್ತಿ ನ. 27ರಂದು ದಕ್ಷಿಣ ಆಫ್ರಿಕಾಗೆ ವಾಪಸ್ ಆಗಿದ್ದಾನೆ. ದಕ್ಷಿಣ ಆಫ್ರಿಕಾದಿಂದ ಬಂದವನನ್ನು 14 ದಿನ ಕ್ವಾರಂಟೈನ್ ಮಾಡದೆ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಸದ್ಯ ಶಾಂಗ್ರಿಲಾ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ..

south african man escape from hotel in Bangalore
ಒಮಿಕ್ರಾನ್ ಭೀತಿ; ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಮುನ್ನವೇ ಸೋಂಕಿತ ವ್ಯಕ್ತಿ ಎಸ್ಕೇಪ್

By

Published : Dec 4, 2021, 2:27 PM IST

ಬೆಂಗಳೂರು :ಒಮಿಕ್ರಾನ್ ಸೋಂಕಿತನ ಕ್ವಾರಂಟೈನ್ ವಿಚಾರದಲ್ಲಿ ಬಿಬಿಎಂಪಿ ಯಡವಟ್ಟು ಮಾಡಿದೆ. ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ಮುನ್ನವೇ ಸೋಂಕಿತ ವ್ಯಕ್ತಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಬಿಎಂಪಿ ಹಾಗೂ ಶಾಂಗ್ರಿಲಾ ಹೋಟೆಲ್ ಸಿಬ್ಬಂದಿಗೆ ಸೋಂಕಿತ ಚಳ್ಳೆಹಣ್ಣು ತಿನ್ನಿಸಿದ್ದ. ಒಮಿಕ್ರಾನ್ ಸೋಂಕಿತನ ಕೋವಿಡ್ ನೆಗೆಟಿವ್ ರಿಪೋರ್ಟ್ ಲಭ್ಯವಿದ್ದು, ಅದನ್ನ ತೋರಿಸಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾನೆ. ಈತ ನವೆಂಬರ್ 27ರ ಮಧ್ಯರಾತ್ರಿ 12:34ಕ್ಕೆ ಹೋಟೆಲ್ ತೊರೆದಿದ್ದಾನೆ.

ಶಾಂಗ್ರಿಲಾ ಹೋಟೆಲ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ಸಂವಹನ ಕೊರತೆಯಿಂದಾಗಿ ಹೋಟೆಲ್ ಸಿಬ್ಬಂದಿ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ. ನೆಗೆಟಿವ್ ರಿಪೋರ್ಟ್ ನೀಡಿದ ಎಂದು ಹೋಟೆಲ್ ಸಿಬ್ಬಂದಿ ಆತನನ್ನು ಬಿಟ್ಟು ಕಳಿಸಿದ್ದಾರೆ.

ನವೆಂಬರ್ 20ರಂದು ಬೆಂಗಳೂರಿಗೆ ಬಂದ ಸೋಂಕಿತ 27ರಂದು ದಕ್ಷಿಣ ಆಫ್ರಿಕಾಗೆ ವಾಪಸ್ ಆಗಿದ್ದಾನೆ. ದಕ್ಷಿಣ ಆಫ್ರಿಕಾದಿಂದ ಬಂದವನನ್ನು 14 ದಿನ ಕ್ವಾರಂಟೈನ್ ಮಾಡುವಲ್ಲಿ ಅಧಿಕಾರಿಗಳು ಯಡವಟ್ಟು ಮಾಡಿದ್ದಾರೆ. ಸದ್ಯ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ನೋಟಿಸ್ ನೀಡಿದೆ.

ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಳ

ಒಮಿಕ್ರಾನ್ ಪತ್ತೆಗೂ ಮುನ್ನ ರಾಜ್ಯದಲ್ಲಿ ನಿತ್ಯ ಸರಾಸರಿ 60-70 ಸಾವಿರದಷ್ಟು ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಇದೀಗ ಹೊಸ ಸೋಂಕಿನ ಭೀತಿಯಿಂದ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ನಿತ್ಯ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಭಾರತ ಸೇರಿದಂತೆ ಸುಮಾರು 38 ದೇಶಗಳಲ್ಲಿ ಈ ಸೋಂಕು ಹರಡಿದ್ದು, 674 ಜನರಲ್ಲಿ ಪತ್ತೆಯಾಗಿದೆ. ಹೀಗಾಗಿ, ಕಳೆದೊಂದು ವಾರದಿಂದ ಪರೀಕ್ಷಾ ಸಂಖ್ಯೆ ಹೆಚ್ಚಳ ಮಾಡಲಾಗಿದೆ.

ದಿನಾಂಕ- ಪರೀಕ್ಷೆ ಸಂಖ್ಯೆ- ಪಾಸಿಟಿವ್ ಕೇಸ್
28-11-2021- 77,818- 315 ಪಾಸಿಟಿವ್
29-11-2021- 56,825- 257 ಪಾಸಿಟಿವ್
30-11-2021- 61,804- 291 ಪಾಸಿಟಿವ್
01-12-2021- 1,01,778- 322 ಪಾಸಿಟಿವ್
02-12-2021- 1,06,300- 363 ಪಾಸಿಟಿವ್
03-12-2021- 1,05,879- 413 ಪಾಸಿಟಿವ್

ಕೊರೊನಾ ಕರಿನೆರಳು ಮಾಯವಾಗುವ ಮುನ್ನವೇ ಬೆಂಗಳೂರಿನಲ್ಲಿ ಇಬ್ಬರಿಗೆ ಒಮಿಕ್ರಾನ್ ಪತ್ತೆಯಾಗಿದೆ. ಇದರಿಂದ ಜನರಲ್ಲಿ ಭೀತಿ ಮೂಡಿದೆ. ನಿನ್ನೆಯಷ್ಟೇ ತಜ್ಞರು, ಪರಿಣಿತರೊಂದಿಗೆ ಸಿಎಂ ಸಭೆ ನಡೆಸಿ ಹಲವು ಕ್ರಮಗಳನ್ನ, ಮಾರ್ಗಸೂಚಿಯನ್ನ ಹೊರಡಿಸಿದ್ದಾರೆ.

ಇಂದು ಪ್ರಾಥಮಿಕ ಸಂಪರ್ಕಿತರ ವರದಿ!
46 ವರ್ಷದ ವೈದ್ಯರಿಗೆ ಒಮಿಕ್ರಾನ್ ವೈರಸ್ ಹರಡಿದ್ದು, ಇದೀಗ ಅವರ ಪ್ರಾಥಮಿಕ ಸಂಪರ್ಕಿತರ ವರದಿ ಇಂದು ಬರುವ ಸಾಧ್ಯತೆ ಇದೆ. ವೈದ್ಯರ ಸಂಪರ್ಕದಲ್ಲಿದ್ದ ಐದು ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಐದು ಮಂದಿಯ ಸ್ಯಾಂಪಲ್‌ ಕೂಡ ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳಿಸಲಾಗಿದೆ. ಇಂದು ಕೆಲವರ ವರದಿ ಬರುವ ಸಾಧ್ಯತೆ ಇದ್ದು ಆತಂಕ ಹೆಚ್ಚಳವಾಗಿದೆ.

ಪ್ರಾಥಮಿಕ ಸಂಪರ್ಕಿತ ಐದು ಮಂದಿ ಕೂಡ ವೈದ್ಯರಾಗಿದ್ದಾರೆ. ಒಮಿಕ್ರಾನ್ ಪತ್ತೆಯಾಗಿರುವ ವೈದ್ಯರ ಪತ್ನಿ ಕೂಡ ಪಾಸಿಟಿವ್ ಆಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ನಾಲ್ಕು ಮಂದಿ ಪ್ರಾಥಮಿಕ ಸಂಪರ್ಕಿತರು ಕೂಡ ಬೌರಿಂಗ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ವರದಿ ಇಂದು ಲಭ್ಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

For All Latest Updates

ABOUT THE AUTHOR

...view details