ಕರ್ನಾಟಕ

karnataka

ETV Bharat / city

ಬಿಲ್‌ ಕಟ್ಟಿ ತಂದೆಯ ಮೃತದೇಹವನ್ನು ಆಸ್ಪತ್ರೆಯಲ್ಲೇ ಬಿಟ್ಟ ಮಗ: ಆರೋಗ್ಯ ಸಿಬ್ಬಂದಿಯಿಂದ ಅಂತ್ಯಕ್ರಿಯೆ - ಮಗ ಇದ್ದರು ಅನಾಥ ಶವವಾದ ಕೊರೊನಾ ಸೋಂಕಿತ

ಕೋವಿಡ್​​ಗೆ ಬಲಿಯಾದ ತಂದೆಯ ಮೃತದೇಹವನ್ನು ತೆಗೆದುಕೊಂಡು ಹೋಗಲು ಮಗ ಹಿಂದೇಟು ಹಾಕಿದ ಘಟನೆ ಮಹಾನಗರದಲ್ಲಿ ನಡೆದಿದೆ. ಅನಾಥವಾಗಿದ್ದ ಮೃತದೇಹಕ್ಕೆ ಆಸ್ಪತ್ರೆ ಸಿಬ್ಬಂದಿ ಮತ್ತು ಬಿಝಡ್​​​ ಜಮೀರ್ ತಂಡದವರು ಸೇರಿಕೊಂಡು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

son-hesitate-to-take-his-father-dead-body-for-funeral
ಕೊರೊನಾ ಸೋಂಕಿತರ ಅಂತ್ಯಕ್ರಿಯೆ

By

Published : Aug 22, 2020, 4:19 PM IST

ಬೆಂಗಳೂರು: ಕೊರೊನಾ ವೈರಸ್‌ ಸೋಂಕಿನಿಂದ ಮೃತಪಟ್ಟಿದ್ದ ತಂದೆಯ ಶವವನ್ನು ಪಡೆಯಲು ಮಗ ಹಿಂದೇಟು ಹಾಕಿದ ಘಟನೆ ನಗರದಲ್ಲಿ ನಡೆದಿದೆ.

ತೀವ್ರ ಉಸಿರಾಟದ ತೊಂದರೆಯಿಂದ 63 ವರ್ಷದ ಚಾಮರಾಜಪೇಟೆ ನಿವಾಸಿ ಕೆ. ಸಿ. ಕುಮಾರ್ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 13 ರಂದು ಚಿಕಿತ್ಸೆ ಫಲಕಾರಿಯಾಗದೆ ಇವರು ಸಾವನ್ನಪ್ಪಿದ್ದಾರೆ. ಮೃತದೇಹ ಹಸ್ತಾಂತರ ಮಾಡಲು ಮೃತ ವ್ಯಕ್ತಿಯ ಪುತ್ರನಿಗೆ ಆಸ್ಪತ್ರೆಯವರು ಕರೆ ಮಾಡಿದ್ದಾರೆ.

ಅಪ್ಪನ ಮೃತದೇಹ ತೆಗೆದುಕೊಂಡು ಹೋಗಲು ಬಾರದ ಮಗ

ಆದ್ರೆ, ಆಸ್ಪತ್ರೆಯಿಂದ ವಿಷಯ ತಿಳಿದ ತಕ್ಷಣ ಬರ್ತೀನಿ ಅಂತ ಹೇಳಿದ ಮಗ ಬರಲೇ ಇಲ್ಲ. ಒಂದೂವರೆ ಲಕ್ಷ ರೂ ಬಿಲ್ ಕೂಡ ಪಾವತಿಸಿರುವ ಮಗನಿಗೆ ತಂದೆಯ ಶವ ಬೇಡವಾಗಿದೆ. ಅಲ್ಲದೆ ಪದೇ ಪದೇ ಕರೆ ಬರುತ್ತಿದೆ ಎನ್ನುವ ಕಾರಣಕ್ಕೆ ಆಸ್ಪತ್ರೆಯ ಫೋನ್ ನಂಬರ್ ಅನ್ನೇ ಬ್ಲಾಕ್ ಮಾಡಿದ್ದಾನೆ.

22 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದ ಮೃತದೇಹವನ್ನು ಯಾರೂ ಬಾರದ ಕಾರಣ ಆಸ್ಪತ್ರೆ ಸಿಬ್ಬಂದಿ ಮತ್ತು ಬಿಝಡ್​​​ ಜಮೀರ್(BZ Jameer team) ತಂಡದವರು ಪಡೆದು ಗೌರವಯುತವಾಗಿ ಅಂತ್ಯ ಸಂಸ್ಕಾರ ನರವೇರಿಸಿದ್ದಾರೆ.

ABOUT THE AUTHOR

...view details