ಕರ್ನಾಟಕ

karnataka

ETV Bharat / city

ದಾಖಲೆ ಕೊಡಬೇಡಿ, ಚುನಾವಣೆ ಬಂದಾಗ ನೀವೇ ಓಡಿ ಬರುತ್ತೀರಾ: ಕೈ ನಾಯಕರಿಗೆ ಆರ್​​.ಅಶೋಕ್​​ ಟಾಂಗ್​​

ಕೆಲ ಮಾಜಿ ಮಂತ್ರಿಗಳು ನಾನು ಯಾವ ದಾಖಲೆನೂ ಕೊಡಲ್ಲ ಎಂದಿದ್ದಾರೆ. ಅವರು ಹಾಗೇ ಮಾಡಿದರೆ ಒಳ್ಳೇದು. ದಯವಿಟ್ಟು ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ.

KN_BNG_03_RASHOK_BYTE_SCRIPT_7201951
ದಾಖಲೆ ಕೊಡಬೇಡಿ, ಚುನಾವಣೆ ಬಂದಾಗ ನೀವೇ ಓಡಿ ಬರುತ್ತೀರ: ಕೈ ನಾಯಕರಿಗೆ ಸಚಿವ ಆರ್.ಅಶೋಕ್ ಟಾಂಗ್

By

Published : Dec 26, 2019, 7:36 PM IST

ಬೆಂಗಳೂರು:ಕೆಲ ಮಾಜಿ ಮಂತ್ರಿಗಳು ನಾನು ಯಾವ ದಾಖಲೆನೂ ಕೊಡಲ್ಲ ಎಂದಿದ್ದಾರೆ. ಅವರು ಹಾಗೇ ಮಾಡಿದರೆ ಒಳ್ಳೇದು. ದಯವಿಟ್ಟು ಮಾಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ‌ನೀಡಿದ್ದಾರೆ.

ಸಚಿವ ಆರ್.ಅಶೋಕ್
ಕೆಲ ಕಾಂಗ್ರೆಸ್ ಶಾಸಕರು, ಮಾಜಿ ಮಂತ್ರಿಗಳು ಪೌರತ್ವ ಕಾಯ್ದೆಗೆ ತಾವು ದಾಖಲೆನೇ ಕೊಡುವುದಿಲ್ಲ‌ ಎಂದಿದ್ದಾರೆ. ಹಾಗೆ ಮಾಡಿದರೆ ನಿಮಗೆ ಚುನಾವಣೆಯಲ್ಲಿ ಸ್ಪರ್ಧೆ‌ ಮಾಡಲು ಆಗುವುದಿಲ್ಲ. ಈ ರೀತಿಯ ರಾಜಾರೋಷದ ಮಾತು ನಡೆಯಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​​ಗೆ ಟಾಂಗ್ ನೀಡಿದರು. ಅಮೆರಿಕದಂತಹ ದೇಶಕ್ಕೆ ಹೋದರೆ ಅಲ್ಲಿ ವೀಸಾ ಅವಧಿ ಮೀರಿದರೆ ಅರ್ಧ ಗಂಟೆ ಇರಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಹೊರ ದೇಶದವರು ಅಕ್ರಮವಾಗಿ ಬಂದು ಇಲ್ಲಿ ನಕಲಿ ರೇಷನ್ ಕಾರ್ಡ್ ತಗೊಂಡು ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಿದ್ದಾರೆ. ದೇಶದ ಜನರು ಕಟ್ಟುವ ತೆರಿಗೆ ದುರುಪಯೋಗ ಮಾಡುತ್ತಿದ್ದಾರೆ. ಬಾಂಗ್ಲಾದೇಶ, ಪಾಕ್‌ನಿಂದ ಬರುವುದಕ್ಕೆ ಇದು ಧರ್ಮ ಛತ್ರ ಅಲ್ಲ. ಸವಾಲು ಹಾಕುವ ಮೂಲಕ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಶಾಸಕರಾಗಲಿ, ಬಿಜೆಪಿ ಶಾಸಕರಾಗಲಿ ಎಲ್ಲರೂ ಒಪ್ಪಲೇಬೇಕು. ನೆಲದ ಕಾನೂನುಗಳನ್ನು ಪಾಲಿಸಲೇಬೇಕು ಎಂದರು.

ABOUT THE AUTHOR

...view details