ಕರ್ನಾಟಕ

karnataka

ETV Bharat / city

ಹಗಲಲ್ಲೇ ಚಿನ್ನಾಭರಣ ದರೋಡೆ: ಇಬ್ಬರು ಐನಾತಿ ಕಳ್ಳರನ್ನು ಜೈಲಿಗಟ್ಟಿದ ಪೊಲೀಸರು - ಬೆಂಗಳೂರು

ಹಗಲಿನಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರು ಐನಾತಿ ಖದೀಮರನ್ನು ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ. ಬಂಧಿತರಿಂದ 12.50 ಲಕ್ಷ ರೂ. ಬೆಲೆ ಬಾಳುವ 240 ಗ್ರಾಂ ಚಿನ್ನಾಭರಣ, 103 ಗ್ರಾಂ ಬೆಳ್ಳಿ, 2 ದ್ವಿಚಕ್ರ ವಾಹನ, 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

Soladevanahalli police arrested two Thieves and send to Jail
ಹಗಲಲ್ಲೇ ಚಿನ್ನಾಭರಣ ದರೋಡೆ: ಇಬ್ಬರು ಐನಾತಿ ಕಳ್ಳರನ್ನು ಜೈಲಿಗಟ್ಟಿದ ಪೊಲೀಸರು

By

Published : Dec 19, 2020, 3:00 AM IST

ಬೆಂಗಳೂರು: ಹಗಲು ವೇಳೆಯೇ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿ, 12 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಹೆಸರಘಟ್ಟದ ಮೂಲದ ಮಂಜುನಾಥ್(27), ಸುದೀಪ್ ಬಂಧಿತ ಆರೋಪಿಗಳು. ಆಶಾ ಕಾರ್ಯಕರ್ತೆಯಾದ ಬೈಲ ಹನುಮಕ್ಕ ಎಂಬ ಮಹಿಳೆ ಸೆಪ್ಟೆಂಬರ್ 9 ರಂದು ಕೆಲಸದ ಮೇಲೆ ಹೊರ ಹೋಗಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಮನೆಯ ಬೀರುವಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಸಾಮಾನುಗಳು ಕಳ್ಳತನವಾಗಿದ್ದವು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಇಬ್ಬರ ಬಂಧನದಿಂದ ಸುಮಾರು 12.50 ಲಕ್ಷ ರೂ. ಬೆಲೆ ಮೌಲ್ಯದ 240 ಗ್ರಾಂ ಚಿನ್ನಾಭರಣ, 103 ಗ್ರಾಂ ಬೆಳ್ಳಿ, 2 ದ್ವಿಚಕ್ರ ವಾಹನ ಹಾಗೂ 2 ಮೊಬೈಲ್‌ಗಳನ್ನು ಸೀಜ್‌ ಮಾಡಿದ್ದಾರೆ. ಆರೋಪಿ ಸುದೀಪ್ 2018ರಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಲಿಗೆ, ಮೊಬೈಲ್ ಕಳವು ಪ್ರಕರಣದಲ್ಲಿ ಜೈಲುಸೇರಿದ್ದ. ಜಾಮೀನಿನ ಮೇಲೆ ಹೊರ ಬಂದ ಆರೋಪಿ ಐಷರಾಮಿ ಜೀವನ ನಡೆಸಲು ಮತ್ತೆ ಕಳ್ಳತನಕ್ಕೆ ಇಳಿದಿದ್ದ ಎಂಬುದು ತನಿಖೆ ತಿಳಿದು ಬಂದಿದೆ.

ABOUT THE AUTHOR

...view details