ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಕಸ್ಟಮ್ಸ್ ಇಂಟೆಲಿಜೆನ್ಸ್ ವಿಂಗ್ನ ಅಧಿಕಾರಿಗಳು ಡ್ರಗ್ಸ್ ಜಾಲವನ್ನು ಪತ್ತೆ ಮಾಡಿದ್ದಾರೆ. ಐಲೈನರ್ ಮಾಸ್ಕರಾ ಮತ್ತು ಲೇಡಿಸ್ ಚಪ್ಪಲಿಯೊಳಗೆ ಮೆಥಾಕ್ವಾಲೋನ್ ಮಾದಕ ದ್ರವ್ಯವನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಡ್ರಗ್ಸ್ ಕಳ್ಳ ಸಾಗಾಣಿಕೆ ಪತ್ತೆ ಮಾಡಲಾಗಿದೆ. ಅನುಮಾನದ ಮೇಲೆ ಸೌತ್ ಆಫ್ರಿಕಾದಿಂದ ಬಂದಿದ್ದ ಐಲೈನರ್ ಮಾಸ್ಕರಾ ತಪಾಸಣೆ ನಡೆಸಿದ್ದಾಗ ಅದರೊಳಗೆ 490 ಗ್ರಾಂ ತೂಕದ 24.50 ಲಕ್ಷ ಮೌಲ್ಯದ ಮೆಥಾಕ್ವಾಲೋನ್ ಮಾದಕ ದ್ರವ್ಯ ಪತ್ತೆಯಾಗಿದೆ.
ಐಲೈನರ್ ಮತ್ತು ಲೇಡಿಸ್ ಚಪ್ಪಲಿಯೊಳಗೆ ಡ್ರಗ್ಸ್ ಸಾಗಾಟ: ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಂದ ಜಾಲ ಪತ್ತೆ - ಐಲೈನರ್ ಮತ್ತು ಲೇಡಿಸ್ ಚಪ್ಪಲಿಯೊಳಗೆ ಡ್ರಗ್ಸ್ ಸಾಗಾಟ
ಕಸ್ಟಮ್ಸ್ ಅಧಿಕಾರಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಡ್ರಗ್ಸ್ ಕಳ್ಳ ಸಾಗಾಣಿಕೆ ಪತ್ತೆ ಮಾಡಿದ್ದಾರೆ. ಐಲೈನರ್ ಮತ್ತು ಲೇಡಿಸ್ ಚಪ್ಪಲಿಯೊಳಗೆ ಡ್ರಗ್ಸ್ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿದ್ದಾರೆ.
ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಂದ ಜಾಲ ಪತ್ತೆ
ಎರಡನೇ ಪ್ರಕರಣದಲ್ಲಿ ವೆಸ್ಟ್ ಆಫ್ರಿಕಾದಿಂದ ಬಂದ ಲೇಡಿಸ್ ಚಪ್ಪಲಿಗಳನ್ನ ತಪಾಸಣೆ ನಡೆಸಿದ್ದಾಗ ಚಪ್ಪಲಿಯೊಳಗೆ 241 ಗ್ರಾಂ ತೂಕದ 12 ಲಕ್ಷ ಮೌಲ್ಯದ ಮೆಥಾಕ್ವಾಲೋನ್ ಮಾದಕ ದ್ರವ್ಯ ಪತ್ತೆಯಾಗಿದೆ. ಎರಡು ಪ್ರಕರಣಗಳು ಎನ್ಡಿಪಿಎಸ್ ಆಕ್ಟ್ 1985ರ ಅಡಿ ಪ್ರಕರಣ ದಾಖಲಾಗಿದೆ.
Last Updated : Nov 6, 2020, 1:22 AM IST