ಕರ್ನಾಟಕ

karnataka

ETV Bharat / city

ಸಿಡಿ ಕೇಸ್​: ವಿಡಿಯೋ ಚಿತ್ರೀಕರಣವಾಗಿದ್ದು ಕೋವಿಡ್ ಅನ್​ಲಾಕ್​ ನಂತರ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಐಟಿ ತನಿಖೆ ಮುಂದುವರೆಸಿದ್ದು, ಸಿಡಿ ಮಾಡಿದವರ ಮೇಲೆ ತನಿಖಾಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

sit-investigation-on-jarakiholi-cd-case
ರಾಸಲೀಲೆ ವಿಡಿಯೋ ಚಿತ್ರೀಕರಣವಾಗಿದ್ದು ಕೋವಿಡ್ ಅನ್​ಲಾಕ್​ ನಂತರ.!

By

Published : Apr 3, 2021, 10:54 PM IST

ಬೆಂಗಳೂರು:ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು ಹಾಗೂ ಯುವತಿಯನ್ನು ವಿಚಾರಣೆ ನಡೆಸಿದ ಎಸ್‌ಐಟಿ, ಈ ವಿಡಿಯೋ ಚಿತ್ರೀಕರಿಸಿದ ಮತ್ತು ಸಹಕರಿಸಿದವರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಕೋವಿಡ್ ಆನ್‌ಲಾಕ್ ನಂತರ ಮಾಜಿ ಸಚಿವರ ಖಾಸಗಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿಯು ಎಸ್‌ಐಟಿಗೆ ಲಭ್ಯವಾಗಿದ್ದು, ಈ ವಿಡಿಯೋ ಸೂತ್ರದಾರರು ಯಾರು ಎನ್ನುವ ಪ್ರಶ್ನೆಗೆ ಎಸ್ಐಟಿ ಉತ್ತರವನ್ನು ಹುಡುಕಲು ಗಂಭೀರವಾಗಿ ತನಿಖೆಯಲ್ಲಿ ತೊಡಗಿಸಿಕೊಂಡಿದೆ.

ಇದನ್ನೂ ಓದಿ: ಯುವರತ್ನನ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ: ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

ಈ ಬಗ್ಗೆ ಯುವತಿಯು ಕೆಲ ಮಾಹಿತಿ ನೀಡಿದ್ದು, ಇದರ ಆಧಾರದ ಮೇಲೆ ತನಿಖೆ ನಡೆಸಲು ಎಸ್‌ಐಟಿ ಮುಂದಾಗಿದೆ. ಶಂಕಿತರು ಎನ್ನಲಾದ ಕಿಂಗ್ ಪಿನ್ ನರೇಶ್ ಗೌಡ ಸೇರಿ ಹಲವರನ್ನು ರೌಂಡ್ ಅಪ್ ಮಾಡಲು ಸಜ್ಜಾಗಿದೆ.

ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರ ಹೆಸರುಗಳು ಕೇಳಿ ಬಂದಿದ್ದು, ಯುವತಿಯ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ಕಾಲ್ ಲಿಸ್ಟ್ ಪರಿಶೀಲಿಸಿದ್ದಾರೆ.

ABOUT THE AUTHOR

...view details