ಬೆಂಗಳೂರು: ತಮ್ಮ ಸರ್ಕಾರದ ಅವಧಿಯಲ್ಲಿ ಮನೆಗಳ ನಿರ್ಮಾಣದ ಕುರಿತು ಸದನದಲ್ಲಿ ಬಿಜೆಪಿ ವ್ಯಕ್ತಪಡಿಸಿದ್ದ ಆರೋಪಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಮಂಗಳವಾರದಂದು ತಮ್ಮ ಸರ್ಕಾರದ ಮೇಲಿನ ಆರೋಪಕ್ಕೆ ಟ್ವೀಟ್ ಮೂಲಕ ಉತ್ತರ ನೀಡಿರುವ ಸಿದ್ದರಾಮಯ್ಯ, ನಮ್ಮ ಸರ್ಕಾರ ನಿರ್ಮಿಸಿದ್ದ ಮನೆಗಳ ಲೆಕ್ಕ ಸುಳ್ಳು ಎಂದು ಬಿಜೆಪಿ ಶಾಸಕ ಪಿ.ರಾಜೀವ್ ಇಂದು ಸದನದಲ್ಲಿ ಸವಾಲು ಹಾಕಿದ್ದರು.
ನಮ್ಮ ಸರ್ಕಾರ ಕಟ್ಟಿದ ಮನೆಗಳ ಲೆಕ್ಕ ಇಲ್ಲಿದೆ. ಇದು ರಾಜ್ಯ ಸರ್ಕಾರದ ಮಾಹಿತಿ. ನಾವು ನುಡಿದಂತೆ ನಡೆದವರು. ರಾಜ್ಯ ಬಿಜೆಪಿ ನಾಯಕರಂತೆ ಸುಳ್ಳಿನ ರಾಜರಲ್ಲ ಎಂದಿದ್ದಾರೆ.